ಬೆಂಗಳೂರಿನಲ್ಲಿ ಮತ್ತೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಶುರು. ಬೆಂಗಳೂರು,ಅಕ್ಟೋಬರ್,10,2022(..):ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಶುರುವಾಗಿದೆ. ಹೈಕೋರ್ಟ್ ತರಾಟೆ ಬಳಿಕ ಬಿಬಿಎಂಪಿ ಅಲರ್ಟ್ ಆಗಿದ್ದು, ಕೆ.ಆರ್ ಪುರಂನಲ್ಲಿ 400 ಮೀಟರ್ ರಾಜಕಾಲುವೆ ಮೇಲಿದ್ಧ ಕಾಂಪೌಂಡ್ ಅನ್ನ ತೆರವು ಮಾಡಲಾಯಿತು. ಎಇಇ ಪಂಪಾಪತಿ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಮಹದೇವಪುರದ ಬೆಳ್ಳಂದೂರು ವರ್ತೂರು, ಮುನ್ನೆಕೊಳ್ಳಾಲ ಮೂರು ಕಡೆಗಳಲ್ಲಿ ಬಿಬಿಎಂಪಿ ಪಾಲಿಕೆ ಅಧಿಕಾರಿಗಳಿಂದ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಕೆಆರ್ ಪುರಂನಲ್ಲಿ ರಾಜಕಾಲುವೆ ಒತ್ತುವರಿ ತೆರವಿಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು. : - - - – .