ಎಐಸಿಸಿ ಅಧ್ಯಕ್ಷ ಚುನಾವಣೆ ಡ್ರಾಮಾ ನಡೆಯುತ್ತಿದೆ: ಬೇಕಿದ್ರೆ ಖರ್ಗೆ ಅವರನ್ನೇ ಕೇಳಿ- ಸಿ.ಟಿ ರವಿ ವ್ಯಂಗ್ಯ. ಬೆಂಗಳೂರು,ಅಕ್ಟೋಬರ್,6,2022(..):ಅಕ್ಟೋಬರ್ 17 ರಂದು ನಡೆಯಲಿರುವ ಎಐಸಿಸಿ ಅಧ್ಯಕ್ಷ ಚುನಾವಣೆ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವ್ಯಂಗ್ಯವಾಡಿದ್ಧಾರೆ. ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆಯ ಡ್ರಾಮಾ ನಡೆಯುತ್ತಿದೆ. ಬೇಕಾದರೇ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಕೇಳಿ ಎಂದು ಸಿ.ಟಿ ರವಿ ಲೇವಡಿ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಸಿ.ಟಿ ರವಿ, ಕುಟುಂಬ ಒಪ್ಪಿದ್ರೆ ಮಾತ್ರ ಅಧ್ಯಕ್ಷ ಸ್ಥಾನ ಸಿಗುತ್ತದೆ. ಇಂಥ ದುರ್ದೈವ ಸ್ಥಿತಿ ಖರ್ಗೆಗೆ ಬರಬಾರದು. ಜೀತಪದ್ಧತಿಯ ಮನೋಭಾವನೆ ಇರಬಾರದು ಎಂದು ಟಾಂಗ್ ನೀಡಿದರು. ನಾಳೆ ಬಿಜೆಪಿ ಕಾರ್ಯಕಾರಿಣಿ ನಡೆಯಲಿದೆ. ನಾಳೆ 10.30ಕ್ಕೆ ಚಾಲನೆ ಸಿಗಲಿದ್ದು, ಅರುಣ್ ಸಿಂಗ್ ಬಿಎಸ್ ಯಡಿಯೂರಪ್ಪ, ಸಿಎಂ ಬೊಮ್ಮಾಯಿ, ನಳೀನ್ ಕುಮಾರ್ ಕಟೀಲ್ ಭಾಗಿಯಾಗಲಿದ್ದಾರೆ. ಸಭೆಯಲ್ಲಿ ಸಂಘಟನಾಯಾತ್ರೆ ಬಗ್ಗೆ ಚರ್ಚೆಯಾಗುತ್ತದೆ ಎಂದು ಸಿ.ಟಿ ರವಿ ತಿಳಿಸಿದರು. : ----