ಫುಡ್ ಪಾಯಿಸನ್ ನಿಂದ ಮೂರು ಅನಾಥ ಮಕ್ಕಳು ಸಾವು: ಎಂಟು ಮಕ್ಕಳು ಗಂಭೀರ ಅಸ್ವಸ್ಥ. ತಮಿಳುನಾಡು,ಅಕ್ಟೋಬರ್,6,2022(..):ಫುಡ್ ಪಾಯಿಸನ್ ನಿಂದ ಮೂರು ಅನಾಥ ಮಕ್ಕಳು ಸಾವನ್ನಪ್ಪಿ ಎಂಟು ಮಕ್ಕಳು ಗಂಭೀರವಾಗಿ ಅಸ್ವಸ್ಥರಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡಿನ ತಿರಪ್ಪೂರ್ ಅನಾಥಾಶ್ರಮದಲ್ಲಿ ಈ ಘಟನೆ ನಡೆದಿದೆ. ಇದೀಗ ಅನಾಥಾಶ್ರಮ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಾಗಿದ್ದು ಈ ಕುರಿತು ತಿರಪ್ಪೊರ್ ಜಿಲ್ಲಾಧಿಕಾರಿ ವಿನೀತ್ ಮಾಹಿತಿ ನೀಡಿದ್ದಾರೆ. ರಾತ್ರಿ ಆಹಾರ ಸೇವಿಸಿದ ಬಳಿಕ ಕೆಲವರಿಗೆ ವಾಂತಿ ಮತ್ತು ಭೇದಿಯಾಗಿದ್ದು, ಅವರೆಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಮಧ್ಯೆ ಆಸ್ಪತ್ರೆಯಲ್ಲಿ ಮೂವರು ಬಾಲಕರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. : - - – .