ನಮ್ಮ ಬಗ್ಗೆ ಟೀಕಿಸುವ ಮೊದಲು ಕಣ್ಣೀರು ಸುರಿಸುತ್ತಿರುವ ಈಶ್ವರಪ್ಪರನ್ನ ಸಮಾಧಾನಪಡಿಸಲಿ- ಬಿಜೆಪಿಗೆ ಡಿಕೆ ಶಿವಕುಮಾರ್ ಟಾಂಗ್. ಮೈಸೂರು,ಅಕ್ಟೋಬರ್,3,2022(..):ಭಾರತ್ ಜೋಡೋ ಯಾತ್ರೆಯನ್ನು ಬಿಟ್ಟು ಮೊದಲು ತಮ್ಮ ಪಕ್ಷವನ್ನು ಜೋಡಿಸಿಕೊಳ್ಳುವಂತೆ ಟೀಕಿಸಿದ ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟಾಂಘ್ ನೀಡಿದ್ದಾರೆ. ಮೈಸೂರಿನಲ್ಲಿ ಈ ಕುರಿತು ಮಾತನಾಡಿದ ಡಿ.ಕೆ ಶಿವಕುಮಾರ್, ಬಿಜೆಪಿಗೆ ನಮ್ಮ ಪಕ್ಷದ ಬಗ್ಗೆ ಯೋಚಿಸುವ ಅಗತ್ಯವಿಲ್ಲ. ತಮ್ಮಲ್ಲಿರುವ ಪ್ರಮಾದಗಳನ್ನು ಅವರು ಸರಿಪಡಿಸಿಕೊಳ್ಳಲಿ, ಪಾಪ ಈಶ್ವರಪ್ಪ ಕಣ್ಣೀರು ಸುರಿಸುತ್ತಿದ್ದಾರೆ. ಅವರನ್ನ ಸಮಾಧಾನಪಡಿಸಲಿ ಎಂದು ಲೇವಡಿ ಮಾಡಿದರು. ಅಕ್ಟೋಬರ್ 6 ರಂದು ನಡೆಯುವ ಪಾದಯಾತ್ರೆಯಲ್ಲಿ ಸೋನಿಯಾ ಗಾಂಧಿ ಪಾಲ್ಗೊಳ್ಳಲಿದ್ದಾರೆ ಹಬ್ಬ ಹಿನ್ನೆಲೆಯಲ್ಲಿ 2 ದಿನ ವಿಶ್ರಾಂತಿ ಪಡೆಯುತ್ತಾರೆ. ಅಲ್ಲಿಗೆ ಯಾವ ಕಾರ್ಯಕರ್ತ, ಮುಖಂಡರಿಗೂ ಅವಕಾಶ ಇಲ್ಲ. ಅ. 5 ರಂದು ಮೈಸೂರಿಗೆ ಖರ್ಗೆ ಬರಲಿದ್ದಾರೆ. ಅ.6 ರಂದು ಖರ್ಗೆ ಕೂಡ ಭಾಗಿಯಾಗಲಿದ್ದಾರೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು. : – – - -