ಮಂಡ್ಯ ಜಿಲ್ಲೆಗೆ ಪ್ರವೇಶಿಸಿ ಭಾರತ್ ಜೋಡೋ ಯಾತ್ರೆ; ರಾಹುಲ್ ಗಾಂಧಿ ಸ್ವಾಗತಿಸಿದ ‘ಕೈ ‘ಮುಖಂಡರು ಮಂಡ್ಯ,ಅಕ್ಟೋಬರ್,3,2022(..):ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ಇಂದು ಮಂಡ್ಯ ಪ್ರವೇಶಿಸಿದ್ದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಮುಖಂಡರು ಸ್ವಾಗತ ಕೋರಿದೆ. ಮಂಡ್ಯದ ಮುಗುವನಗಳ್ಳಿ ಬಳಿಗೆ ಭಾರತ್ ಜೋಡೋ ಯಾತ್ರೆ ಪ್ರವೇಶಿದಿದ್ದು ಕಾಂಗ್ರೆಸ್ ಮುಖಂಡ ಚಲುವರಾಯಸ್ವಾಮಿ ಸೇರಿ ಮಂಡ್ಯ ಕಾಂಗ್ರೆಸ್ ಮುಖಂಡರು ಭಾರತ್ ಜೋಡೋ ಯಾತ್ರೆಯನ್ನ ಸ್ವಾಗತಿಸಿದರು. ರಾಜ್ಯದಲ್ಲಿ 21 ದಿನಗಳ ಭಾರತ್ ಜೋಡೋ ಯಾತ್ರೆ ನಡೆಯಲಿದ್ದು, ಈಗಾಗಲೇ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. : - - – .