ಇಂದಿನಿಂದ ವಿದ್ಯುತ್ ದರ ಏರಿಕೆ: ಹೋಟೆಲ್ ಮಾಲೀಕರ ಸಂಘದಿಂದ ವಿರೋಧ. ಬೆಂಗಳೂರು,ಅಕ್ಟೋಬರ್,1,2022(..):ವಿದ್ಯುತ್ ದರ ಏರಿಕೆಗೆ ಸರ್ಕಾರ ನಿರ್ಧಾರ ಮಾಡಿದ್ದು, ಪ್ರತಿ ಯೂನಿಟ್ ​ಗೆ 43 ಪೈಸೆ ಹೆಚ್ಚಳವಾಗಲಿದೆ. ಇಂದಿನಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ. ಈ ನಡುವೆ ವಿದ್ಯುತ್ ದರ ಏರಿಕೆ ಮಾಡಿರುವ ಸರ್ಕಾರದ ವಿರುದ್ಧ ಹೋಟೆಲ್ ಮಾಲೀಕರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ. ಅ.1ರಿಂದ ಪರಿಷ್ಕೃತ ವಿದ್ಯುತ್ ದರ ಜಾರಿಗೆ ಬರುತ್ತಿದೆ. ದರ ಏರಿಕೆ ನಿರ್ಧಾರವನ್ನ ಮುಂದಿನ ವರ್ಷ ಏಪ್ರಿಲ್ ​ವರೆಗೆ ಮುಂದೂಡುವಂತೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘದಿಂದ ಆಗ್ರಹಿಸಿದೆ. ಈ ಹಿಂದೆಯೂ ಎರಡು ಬಾರಿ ವಿದ್ಯುತ್ ದರ ಏರಿಸಲಾಗಿದೆ, ಈಗ ಮತ್ತೆ ದರ ಏರಿಕೆ ಮಾಡುತ್ತಿರುವುದು ಬಹುದೊಡ್ಡ ಅನ್ಯಾಯ. ದರ ಏರಿಕೆಯಿಂದ ಶೇ.10 ರಷ್ಟು ವಿದ್ಯುತ್ ಬಿಲ್ ಹೆಚ್ಚಾಗುತ್ತೆ. ಜೊತೆಗೆ ಶೇ. 9 ರಷ್ಟ ತೆರಿಗೆ ಹಾಕಲಾಗಿದೆ . ಇದು ಸರಿಯಲ್ಲ. ಸರ್ಕಾರದ ಶೇ.9ರಷ್ಟಿರುವ ತೆರಿಗೆಯನ್ನ ಶೇ 4ಕ್ಕೆ ಇಳಿಸಬೇಕು. ಇಂದಿನಿಂದ ಜಾರಿಯಾದ ಹೊಸ ದರ ಏರಿಕೆಯನ್ನ ಮುಂದಿನ ಏಪ್ರಿಲ್ ವರೆಗೂ ತಡೆಹಿಡಿಯಿರಿ ಎಂದು ಹೋಟೆಲ್ ಮಾಲೀಕರ ಸಂಘ ಒತ್ತಾಯಿಸಿದೆ. : - - - –