ಡಿಕೆಶಿ ಅವರ ಮೇಲೆ ಸಿಬಿಐ ದಾಳಿ ರಾಜಕೀಯ ಪ್ರೇರಿತವಾದ್ರೆ ಜನಾರ್ದನರೆಡ್ಡಿ ಮೇಲೆ ಮಾಡಿದ್ದು ಏನು..? ಸಚಿವ ಆರ್ .ಅಶೋಕ್. ಬೆಂಗಳೂರು,ಸೆಪ್ಟಂಬರ್,30,2022(..):ನನ್ನ ಮೇಲೆ ಸಿಬಿಐ ದಾಳಿ ರಾಜಕೀಯ ಪ್ರೇರಿತವಾದ್ದುದ್ದು ಎಂದು ಹೇಳಿಕೆ ನೀಡಿದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಕಂದಾಯ ಸಚಿವ ಆರ್.ಅಶೋಕ್ ಟಾಂಗ್ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಸಚಿವ ಆರ್.ಅಶೋಕ್, ಡಿಕೆ ಶಿವಕುಮಾರ್ ಅವರ ಮೇಲೆ ಸಿಬಿಐ ದಾಳಿ ರಾಜಕೀಯ ಪ್ರೇರಿತವಾದರೇ ಜನಾರ್ದನ ರೆಡ್ಡಿ ಮೇಲೆ ಕಾಂಗ್ರೆಸ್ ಮಾಡಿದ್ದು ಏನು…? ಎಂದು ಪ್ರಶ್ನಿಸಿದರು. ಪ್ರತಿಬಾರಿಯೂ ಡಿಕೆ ಶಿವಕುಮಾರ್ ಹೀಗೆ ಹೇಳುತ್ತಾರೆ. ಯಾವಾಗ ದಾಳಿ ಮಾಡಬೇಕೆಂದು ಆ ಸಂಸ್ಥೆ ನಿರ್ಧರಿಸುತ್ತದೆ. ಚುನಾವಣೆ ವೇಳೆ ದಾಳಿ ಮಾಡಬಾರದೆಂಬ ನಿಯಮವಿದೆಯೇ ..? ಎಂದು ಕುಟುಕಿದರು. ಬಿಬಿಎಂಪಿ ಚುನಾವಣೆ ಸಂಬಂಧ ಹೈಕೋರ್ಟ್ ಆದೇಶ ಕುರಿತು ಪ್ರತಿಕ್ರಿಯೆ ನೀಡಿದ ಆರ್.ಅಶೋಕ್, ಹೈಕೋರ್ಟ್ ಡಿಸೆಂಬರ್ 31 ರ ಒಳಗೆ ಚುನಾವಣೆ ನಡೆಸಲು ಹೇಳಿದೆ. ಮೀಸಲಾತಿ ಸರಿ ಮಾಡಿ ಅಂತಲೂ ಕೋರ್ಟ್ ಹೇಳಿದೆ. ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. : - – - -.