ಪಿಎಫ್ ಐ ಆಸ್ತಿ ಬಗ್ಗೆ ಸರ್ವೆ ಮಾಡಿ ಮುಟ್ಟುಗೋಲು- ಗೃಹ ಸಚಿವ ಅರಗ ಜ್ಞಾನೇಂದ್ರ. ಬೆಂಗಳೂರು,ಸೆಪ್ಟಂಬರ್,29,2022(..):ಕೇಂದ್ರ ಸರ್ಕಾರ ನಿನ್ನೆ ಪಿಎಫ್ ಐ ಸಂಘಟನೆಯನ್ನ ಐದು ವರ್ಷಗಳ ಕಾಲ ನಿಷೇಧಿಸಿದ್ದು, ಈ ಸಂಬಂಧ ಪಿಎಫ್ ಐ ಆಸ್ತಿ ಮುಟ್ಟುಗೋಲು ಹಾಕುತ್ತೇವೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ರಾಜ್ಯದಲ್ಲಿ ಪಿಎಫ್ ಐ ಬಗ್ಗೆ ಸರ್ವೆ ಮಾಡುತ್ತೇವೆ. ಸರ್ವೆ ಬಳಿಕ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ದೇಶಾದ್ಯಂತ ಬ್ಯಾನ್ ಮಾಡಲಾಗಿದೆ. ಕೇಂದ್ರ ಸರ್ಕಾರ ನಮಗೆ ಮುಂದಿನ ಜವಾಬ್ದಾರಿ ನೀಡಿದೆ. ನಿನ್ನೆ ಕೇಂಧ್ರ ಸರ್ಕಾರ ನಮಗೆ ಸೂಚನೆ ನೀಡಿದೆ ಎಂದರು. ಪಿಎಫ್ ಐ ಬ್ಯಾನ್ ಆದ ಬಳಿಕ ಗಲಾಟೆ ಆಗಬಹುದು. ಗಲಭೆ ಬಗ್ಗೆ ಪೊಲೀಸರಿಗೆ ಮಾಹಿತಿ ಇದೆ. ಹೀಗಾಗಿ ಪೊಲೀಸರು ಅಲರ್ಟ್ ಆಗಿದ್ದಾರೆ ಎಂದು ಅರಗ ಜ್ಞಾನೇಂದ್ರ ತಿಳಿಸಿದರು. : – – – - - .