ಬಿಜೆಪಿ ಪಾದಯಾತ್ರೆ ಮಾಡಲಿ, ಆರೋಗ್ಯಕ್ಕೆ ಒಳ್ಳೆಯದು – ಸಚಿವ ಎಂ.ಬಿ ಪಾಟೀಲ್ ಬೆಂಗಳೂರು,ಜುಲೈ,31,2024 (..):ಮುಡಾ ಹಗರಣವನ್ನ ಖಂಡಿಸಿ ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆ ಬಗ್ಗೆ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ವ್ಯಂಗ್ಯವಾಡಿದ್ದಾರೆ. ಈ ಕುರಿತು ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಮುಡಾ, ವಾಲ್ಮೀಕಿ ಹಗರಣ ಮುಂದಿಟ್ಟುಕೊಂಡು ಪಾದಯಾತ್ರೆ ಮಾಡುತ್ತಿದ್ದಾರೆ. ಆದರೆ ಬಿಎಪಿ ಅವಧಿಯಲ್ಲಿ ನಿತ್ಯವೂ ಹಗರಣವಾಗಿದೆ. ಬಿಜೆಪಿ ಪಾದಯಾತ್ರೆಗೆ ಕೌಂಟರ್ ಮಾಡಬೇಕಾಗಿಲ್ಲ ಪಾದಯಾತ್ರೆ ಮಾಡಲಿ ಆರೋಗ್ಯಕ್ಕೆ ಒಳ್ಳೆಯದು. ಅವರ ದೇಹದ ತೂಕವೂ ಕಡಿಮೆಯಾಗುತ್ತೆ ಎಂದು ಲೇವಡಿ ಮಾಡಿದರು. ಪಾದಯಾತ್ರೆಗೆ ಬಿಜೆಪಿ ನಾಯಕರಲ್ಲೇ ಗೊಂದಲವಿದೆ. ಪಾದಯಾತ್ರೆಗೆ ಬಸನಗೌಡ ಪಾಟೀಲ್ ಯತ್ನಾಳ್ ರಮೇಶ್ ಜಾರಕಿಹೊಳಿ ಬೆಂಬಲ ಇಲ್ಲ. ಅವರ ಅವಧಿಯ ಹಗರಣ ವಿಚಾರವಾಗಿ ಪಾದಯಾತ್ರೆ ಮಾಡಲಿ ಎಂದು ಎಂಬಿ ಪಾಟೀಲ್ ಟಾಂಗ್ ಕೊಟ್ಟರು. : , , , , ,