ಮೈಸೂರಿನಲ್ಲಿ ಮೂವರು ಪಿಎಫ್ ಐ ಮುಖಂಡರ ಬಂಧನ. ಮೈಸೂರು,ಸೆಪ್ಟಂಬರ್,27,2022(..):ಸಮಾಜಘಾತುಕ ಕೆಲಸದಲ್ಲಿ ಭಾಗಿಯಾದ ಆರೋಪದ ಮೇಲೆ ಮೈಸೂರಿನಲ್ಲಿ ಪಿಎಫ್ಐ ನ ಮತ್ತೆ ಮೂವರು ಮುಖಂಡರನ್ನ ಬಂಧಿಸಲಾಗಿದೆ. ಬಿಲಾಲ್ ಉಲ್ಲ ಷರೀಪ್, ಫಿರೋಜ್ ಉಲ್ಲ ಷರಿಫ್, ಮತ್ತು ಜಾಫರ್ ಪಾಷಾ ಬಂಧಿತ ಆರೋಪಿಗಳು. ಬಂಧಿತರು ಮೈಸೂರಿನ ಕಲ್ಯಾಣಗಿರಿ, ಮಂಡಿಮೊಹಲ್ಲ ಮತ್ತು ರಾಜೇಂದ್ರ ನಗರದ ನಿವಾಸಿಗಳಾಗಿದ್ದಾರೆ. ಮೂವರು ಪಿಎಫ್ಐ ಸಂಘಟನೆಯಲ್ಲಿದ್ದರು. ಕಳೆದ ವಾರ ಮೈಸೂರಿನಲ್ಲಿ ಮಹಮದ್ ಕಲಿಮುಲ್ಲ ಎಂಬ ವ್ಯಕ್ತಿಯನ್ನ ಬಂಧಿಸಲಾಗಿತ್ತು ಶಾಂತಿನಗರದ ಕಲೀಮುದ್ದೀನ್‌ ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದೀಗ ಇಂದು ಮತ್ತೆ ಇಂದು ಮೂವರನ್ನ ಪೋಲಿಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. : - –- – .