ಮೈಸೂರು ದಸರಾ ಭಾರತೀಯ ಸಂಸ್ಕೃತಿಯ ಪ್ರತೀಕ: ನಾಡಿನ ಪರಂಪರೆ ಮತ್ತು ಮಹನೀಯರನ್ನ ಸ್ಮರಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು. ಮೈಸೂರು,ಸೆಪ್ಟಂಬರ್,26,2022(..):ಮೈಸೂರು ದಸರಾ ಭಾರತೀಯ ಸಂಸ್ಕೃತಿಯ ಪ್ರತೀಕ .ಮಹಿಳೆ ಪ್ರಾಧಿನ್ಯತೆಯೇ ದಸರೆಯ ವಿಶೇಷ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಎಂದು ಹೇಳಿದರು. ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟಿಸಿದ ಬಳಿಕ ಕನ್ನಡದಲ್ಲೇ ಭಾಷಣ ಆರಂಭಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಚಾಮುಂಡಿ ತಾಯಿಗೆ ನನ್ನ ಮನಸ್ಪೂರ್ವಕ ನಮಸ್ಕಾರಗಳು , ಎಲ್ಲರಿಗೂ ನನ್ನ ಹೃದಯ ಪೂರ್ವಕ ನಮಸ್ಕಾರಗಳು. ಈ ವರ್ಷದ ದಸರಾ ಮಹೋತ್ಸವ ಉದ್ಘಾಟಿಸಿದ್ದು ಬಹಳ ಸಂತೋಷವಾಗಿದೆ. ನಾಡದೇವತೆ ಚಾಮುಂಡೇಶ್ವರಿ ಇದೇ ಸ್ಥಳದಲ್ಲಿ ಮಹಿಷಾನನ್ನ ಸಂಹಾರ ಮಾಡಿದ್ದಾಳೆ. ಎಲ್ಲರಿಗೂ ಚಾಮುಂಡೇಶ್ವರಿ ಆಶೀರ್ವಾದ ಸಿಗಲಿ. ಎಂದು ಭಾಷಣದಲ್ಲಿ ಉಲ್ಲೇಖಸಿದರು. ದಸರಾ ಉದ್ಘಾಟನೆಗೆ ನನ್ನನ್ನ ಕರೆದಿದ್ದು ಸಂತಸ ತಂದಿದೆ. ಕಲಬುರುಗಿ ಸೂಫಿಸಂತರ ನಾಡಾಗಿತ್ತು. ಈ ರಾಜ್ಯ ಬಸವಣ್ಣ, ಅಲ್ಲಮಪ್ರಭು ಹಲವು ಸಂತರ ನಾಡು. ಭಕ್ತಿ,ಸ್ವಾತಂತ್ರ್ಯಕ್ಕೆ ಕರ್ನಾಟಕ ಹೆಸರುವಾಸಿ. ಬಸವಣ್ಣ ಅಲ್ಲಮಪ್ರಭು ಆದರ್ಶ ವ್ಯಕ್ತಿಗಳಾಗಿದ್ದರು. ಅವರ ವಚನ ಜನತಂತ್ರ ವ್ಯವಸ್ಥೆಗೆ ಮಾದರಿಯಾಗಿದೆ. ದಸರಾ ಪರಂಪರೆ ಇಂದಿಗೂ ಮುಂದುವರೆಯುತ್ತಿರುವುದು ನಮ್ಮ ಹೆಮ್ಮೆ. ರಾಜ್ಯ ಸರ್ಕಾರದ ಪ್ರಯತ್ನದಿಂದ ಮತ್ತಷ್ಟು ವೈಭವೋಪೂರಿತವಾಗಿ ದಸರಾ ಆಚರಿಸಲಾಗುತ್ತಿದೆ. ರಾಣಿ ಅಬ್ಬಕ್ಕ ಕಿತ್ತೂರು ರಾಣಿ ಚನ್ನಮ್ಮರಂತಹ ವೀರವನಿತೆಯರಿದ್ದಾರೆ. ಮೈಸೂರು ದಸರಾ ಭಾರತೀಯ ಸಂಸ್ಕೃತಿ ಪ್ರತೀಕ . ಮಹಿಳೆ ಪ್ರಾಧಿನ್ಯತೆಯೇ ದಸರಾ ವಿಶೇಷ. ಈ ಪರಂಪರೆಯಲ್ಲಿ ಭಾಗಿಯಾಗಲು ಅವಕಾಶ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ದ್ರೌಪದಿ ಮುರ್ಮು ಅವರು ಹೇಳಿದರು. : – – –- - …. : , 26, 2022 (..): “ . ,” . , ’ . “ . . ,” . . . . . , . . . . .“ . - ,” .: / /