ಇಂದಿನಿಂದ ಬಿಗ್ ಬಾಸ್ ಸೀಸನ್ 9: ದೊಡ್ಮನೆಗೆ ಬಂದ ಸುದೀಪ್ ಆಪ್ತ! ಬೆಂಗಳೂರು, ಸೆಪ್ಟೆಂಬರ್ 24, 2022 (..):ಬಿಗ್ ಬಾಸ್ ಸೀಸನ್ 9 ಇಂದಿನಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ವಿಶೇಷ ಎಂದರೆ ನಟ, ಕಲಾ ನಿರ್ದೇಶಕ, ರಂಗಭೂಮಿ ಪ್ರತಿಭೆ ಅರುಣ್ ಸಾಗರ್ ಕೂಡ ಈಗಾಗಲೇ ಬಿಗ್ ಬಾಸ್ ಮನೆ ಸೇರಿದ್ದಾರೆ. ಅಂದಹಾಗೆ ಕಿಚ್ಚ ಸುದೀಪ್ ಅವರಿಗೆ ಅರುಣ್ ತೀರಾ ಆಪ್ತರು ಕೂಡ. ಸೀಸನ್ 1ರಲ್ಲಿ ಬಿಗ್ ಬಾಸ್ ಪಟ್ಟ ಇವರಿಗೆ ಒಲಿಯುತ್ತದೆ ಎಂದು ಹೇಳಲಾಗಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಈ ಬಾರಿ ಆದರೂ ಅವರಿಗೆ ಬಿಗ್ ಬಾಸ್ ಪಟ್ಟ ಒಲಿಯುವುದೇ ಕಾದು ನೋಡಬೇಕಿದೆ. ನಟನಾಗಿ, ಕಲಾ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಅರುಣ್, ತಮ್ಮ ಮಾತುಗಳ ಮೂಲಕವೇ ಮೋಡಿ ಮಾಡಿದವರು.