ಉನ್ನತ ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ: ದಾಖಲೆ ನೀಡಲು ನಾನು ಸಿದ್ಧ- ಮಾಜಿ ಸಚಿವ ಹೆಚ್.ಡಿ ರೇವಣ್ಣ. ಬೆಂಗಳೂರು,ಸೆಪ್ಟಂಬರ್‍,23,2022(..): ಟ್ರಸ್ಟ್‌ʼನಲ್ಲಿ ಅಕ್ರಮ ನಡೆದಿದ್ದು ಈ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸುವಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸೇರಿ ಜೆಡಿಎಸ್ ಸದಸ್ಯರು ವಿಧಾನಸಭೆಯಲ್ಲಿ ಪಟ್ಟು ಹಿಡಿದು ಧರಣಿ ನಡೆಸಿದ್ದಾರೆ. ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಧರಣಿ ನಡೆಸಿದ ಜೆಡಿಎಸ್ ಸದಸ್ಯರು ಟ್ರಸ್ಟ್‌ʼನಲ್ಲಿ ಅಕ್ರಮ ಕುರಿತು ಉತ್ತರ ನೀಡುವಂತೆ ಸರ್ಕಾರಕ್ಕೆ ಆಗ್ರಹಿಸಿದರು. ಈ ಮಧ್ಯೆ ಸದನದಲ್ಲಿ ಮಾತನಾಡಿದ ಶಾಸಕ ಹೆಚ್.ಡಿ ರೇವಣ್ಣ, ಉನ್ನತ ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ದಾಖಲೆ ನೀಡಲು ನಾನು ಸಿದ್ಧ. ಇಲಾಖೆ ಅಕ್ರಮ ಬಗ್ಗೆ ತನಿಖೆ ಮಾಡಿಸ್ತೀರಾ..? ದಾಖಲೆ ನೀಡಲು ವಿಫಲವಾದರೇ ನಾನು ನನ್ನ ಸ್ಥಾನ ಬಿಡುತ್ತೇನೆ ಎಂದು ಸವಾಲು ಹಾಕಿದ್ದಾರೆ. : – - - - .