ಡಿಗ್ರಿ ಪಡೆದ ಯುವಕರಿಗೆ ಕೆಲಸ ಸಿಗದೆ ಇರುವುದರಿಂದ ಕ್ರೈಂ ದಾರಿ ಹಿಡಿಯುತ್ತಿದ್ದಾರೆ- ಮೊಹಮ್ಮದ್ ನಲಪಾಡ್. ಮೈಸೂರು,ಸೆಪ್ಟಂಬರ್,21,2022(..):ಶಿವಮೊಗ್ಗದಲ್ಲಿ ಐಸಿಸಿ ಸಂಪರ್ಕದಲ್ಲಿದ್ದ ಯುವಕರ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ಹ್ಯಾರೀಸ್ ನಲಪಾಡ್, ಡಿಗ್ರಿ ಪಡೆದ ಯುವಕರಿಗೆ ಕೆಲಸ ಸಿಗುತ್ತಿಲ್ಲ.ಹೀಗಾಗಿ ಅವರು ಕ್ರೈಂ ದಾರಿ ಹಿಡಿಯುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕೆಪಿಸಿಸಿ ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್, ಕೆಲಸ ಸಿಗದ ಹಿನ್ನೆಲೆಯ ಯುವಕರು ತಪ್ಪಾದ ದಾರಿಗೆ ಹೋಗುತ್ತಿದ್ದಾರೆ. ಇದೇ ನಡೆಯುತ್ತಿರುವುದು. ಐಸಿಸಿ ಸಂಘಟನೆ ಅಂತಲ್ಲ‌. ಯುವಕರು ತಪ್ಪಾದ ದಾರಿ ಹಿಡಿಯುತ್ತಿರುವುದು ಸತ್ಯ. ನಿರುದ್ಯೋಗ ಇರುವ ಕಾರಣ ಯುವಕರು ತಪ್ಪು ದಾರಿ ಹಿಡಿದಿದ್ದಾರೆ. ಇದಕ್ಕೆ ಬಿಜೆಪಿಗರೇ ನೇರ ಹೊಣೆಗಾರರು. ಕೆಲಸ ಇದ್ದರೆ ಯುವಕರಿಗೆ ತಪ್ಪು ದಾರಿಗೆ ತುಳಿಯುವ ಯೋಚನೆ ಬರಲ್ಲ. 2023 ರವರೆಗೆ ಯುವಕರು ತಾಳ್ಮೆಯಿಂದ ಇರಿ‌. ಸುವರ್ಣ ಕಾಲ ಬರುತ್ತೆ. ತಪ್ಪು ದಾರಿಗೆ ಹೋಗಬೇಡಿ. ಐಸಿಸಿ ಸಂಪರ್ಕದಲ್ಲಿ ಇರೋರರನ್ನು ಭಾರತದಲ್ಲಿ ಇಟ್ಟು ಕೊಳ್ಳಬೇಡಿ. ಅವರಿಗೆ ಗಲ್ಲು ಶಿಕ್ಷೆ ಕೊಡಿ ಎಂದು ಆಗ್ರಹಿಸಿದರು. ಬೆಂಗಳೂರಿನಲ್ಲಿ ಒತ್ತುವರಿ ತೆರವಿಗೆ ಕಾಂಗ್ರೆಸ್ ವಿರೋಧವಿದೆ ಎಂಬ ಬಿಜೆಪಿ ನಾಯಕರ ಆರೋಪ ಕುರಿತು ಪ್ರತಿಕ್ರಿಯಿಸಿದ ನಲಪಾಡ್, ಕಾಂಗ್ರೆಸ್ ಗೂ ಒತ್ತುವರಿ ತೆರವಿಗೂ ಸಂಬಂಧವಿಲ್ಲ. ಬಿಜೆಪಿ ಕಾನೂನು ಪ್ರಕಾರ ಕ್ರಮ ತೆಗೆದು ಕೊಳ್ಳಲಿ. ಒತ್ತುವರಿ ತೆರವು ಮಾಡುವ ಮುನ್ನಾ ವೈಜ್ಞಾನಿಕವಾಗಿ ವರದಿ ತಯಾರಿಸಿ. ಜಸ್ಟ್ ಫ್ಲಡ್ ಬಂದ ತಕ್ಷಣ ಆ ಕಟ್ಟಡ ಹೊಡೆಯಿರಿ. ಈ ಕಟ್ಟಡ ಹೊಡೆಯಿರಿ ಎಂದರೆ ಹೇಗೆ? ವೈಜ್ಞಾನಿಕವಾಗಿ ವರದಿ ತಯಾರು ಮಾಡದೆ ಸಿಕ್ಕ ಸಿಕ್ಕವರ ಮನೆ ಹೊಡೆದರೆ ಹೇಗೆ ಹೇಳಿ? ಎಂದು ಪ್ರಶ್ನಿಸಿದರು. ಭಾರತ್ ಜೋಡೋ ಯಾತ್ರೆ ಸಂಘಟನೆ ವಿಚಾರದಲ್ಲಿ ಕಾಂಗ್ರೆಸ್ ನಾಯಕರಲ್ಲೇ ಅಸಮಾಧಾನ ವಿಚಾರ ಕುರಿತು ಮಾತನಾಡಿದ ನಲಪಾಡ್, ಪಕ್ಷ ಅಂದ ಮೇಲೆ ಅದು ಮನೆ ಇದ್ದಂತೆ, ಮಾತು ಬರುತ್ತವೆ. ನಾವೇ ಮನೆಯೊಳಗೆ ಕೂತು ಮಾತಾಡಿಕೊಂಡು ಸರಿ ಮಾಡಿ ಕೊಳ್ತೀವಿ. ಯಾತ್ರೆಯ ಸಂಘಟನೆ ವಿಚಾರದಲ್ಲಿ ಯಾರೂ ತಾರತಮ್ಯ ಮಾಡುವಂತಿಲ್ಲ. ಯಾರೂ ತುಟಿಕ್ ಪಿಟಿಕ್ ಅನ್ನವ ಆಗಿಲ್ಲ ಎಂದರು. : - – - –- .