ಕೊಡಗು ಜಿಲ್ಲೆಗೆ 14 ದಿನಗಳ ಕಾಲ ದಸರಾ ರಜೆ ಘೋಷಣೆ. ಕೊಡಗು, ಸೆಪ್ಟೆಂಬರ್ ,20,2022(..):ಕೊಡಗು ಜಿಲ್ಲೆಗೆ ಸೆಪ್ಟಂಬರ್ 26ರಿಂದ ಅಕ್ಟೋಬರ್ 9ರವರೆಗೆ ದಸರಾ ರಜೆ ಘೋಷಣೆ ಮಾಡಲಾಗಿದೆ. ಶಿಕ್ಷಣ ಸಚಿವ ಬಿ.ಸಿ ನಾಗೇಶ್ ನಿರ್ದೇಶನದ ಮೇರೆಗೆ ಇಂದು ಜಿಲ್ಲಾಧಿಕಾರಿ ಬಿಸಿ ಸತೀಶ್ ಕೊಡಗು ಜಿಲ್ಲೆಗೆ 14 ದಿನಗಳ ಕಾಲ ದಸರಾ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ. ಅಕ್ಟೋಬರ್ 5 ರಂದು ಮಡಿಕೇರಿಯಲ್ಲಿ ದಸರಾ ನಡೆಯಲಿದೆ. ದಸರಾ ಹಬ್ಬದ ಹಿನ್ನಲೆ ಪ್ರತಿ ಜಿಲ್ಲೆಗಳಿಗೂ ಅಲ್ಲಿನ ಹಬ್ಬದ ಆಚರಣೆಯನ್ನು ಗಮನಿಸಿ ರಜೆ ನೀಡುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿತ್ತು. ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ನಡೆಯುವ ಹಿನ್ನೆಲೆ ಮೈಸೂರು ಜಿಲ್ಲೆಗೂ ಸೆಪ್ಟೆಂಬರ್ 26 ಅಕ್ಟೋಬರ್ 9ರವರೆಗೆ ದಸರಾ ರಜೆ ಘೋಷಣೆ ಮಾಡಲಾಗಿದೆ. : - – 14 – .