ಪೌರಕಾರ್ಮಿಕರ ಸೇವೆ ಖಾಯಂ ಮಾಡಲು ಆಗ್ರಹಿಸಿ ಸಿಎಂ ಮನೆ ಮುಂದೆ ಪ್ರತಿಭಟನೆ. ಬೆಂಗಳೂರು.,ಸೆಪ್ಟಂಬರ್,21,2022(..):ಪೌರಕಾರ್ಮಿಕರ ಸೇವೆ ಖಾಯಂ ಮಾಡಲು ಆಗ್ರಹಿಸಿ ಇಂದು ಪೌರ ಕಾರ್ಮಿಕರು ಸಿಎಂ ಬಸವರಾಜ ಬೊಮ್ಮಾಯಿ ಮನೆ ಮುಂದೆ ಪ್ರತಿಭಟನೆ ನಡೆಸಿದರು. ಆರ್.ಟಿ ನಗರದ ಸಿಎಂ ಬೊಮ್ಮಾಯಿ ನಿವಾಸದ ಬಳಿ ಜಮಾಯಿಸಿದ ಪೌರಕಾರ್ಮಿಕರು, 8 ಸಾವಿರ ಪೌರಕಾರ್ಮಿಕರನ್ನ ಖಾಯಂ ಮಾಡಿಕೊಳ್ಳಲು ಅವಕಾಶವಿದೆ. ಸದ್ಯ ಒಂದು ಸಾವಿರ ಕಾರ್ಮಿಕರನ್ನ ಖಾಯಂ ಮಾಡಲಾಗಿದೆ. ಉಳಿದ 7 ಸಾವಿರ ಪೌರ ಕಾರ್ಮಿಕರ ಸೇವೆಯನ್ನ ಖಾಯಮಾತಿ ಮಾಡಬೇಕು ಎಂದು ಆಗ್ರಹಿಸಿದರು. : -’ - - –- – .