ನೇಮಕಾತಿ ಅಕ್ರಮ ಆರೋಪ : ಯಾವ ಸಂಸ್ಥೆಯಿಂದಾದರೂ ತನಿಖೆ ನಡೆಸಿ, ನಮ್ಮ ತಕರಾರಿಲ್ಲ- ಮಾಜಿ ಸಚಿವ ಕಿಮ್ಮನೆ ರತ್ನಾಕರ್. ಬೆಂಗಳೂರು,ಸೆಪ್ಟಂಬರ್,20,2022(..):ಕಾಂಗ್ರೆಸ್ ಅವಧಿಯಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಟಾಂಗ್ ನೀಡಿದ್ದಾರೆ. ಈ ಕುರಿತು ಮಾತನಾಡಿದ ಕಿಮ್ಮನೆ ರತ್ನಾಕರ್, ಕಾಂಗ್ರೆಸ್ ಅವಧಿಯಲ್ಲಿ ನಾನು ಶಿಕ್ಷಣ ಸಚಿವನಾಗಿದ್ದೆ. ಆಗ ಖಾಲಿ ಹುದ್ದೆಗಳಿಗೆ ಭರ್ತಿಗೆ ಅದೇಶ ಮಾಡಲಾಗಿತ್ತು. ಕೆಳ ಹಂತದಲ್ಲಿ ನೇಮಕಾತಿ ನಡೆದಿದೆ. ಯಾವ ಸಂಸ್ಥೆ ಆದ್ರೂ ತನಿಖೆ ಮಾಡಲಿ. ಸಿಬಿಐನಿಂದಾದ್ರೂ ತನಿಖೆ ಮಾಡಲಿ. ನಮ್ಮ ತಕರಾರು ಇಲ್ಲ ಎಂದಿದ್ದಾರೆ. : – - - -