9,432 ಪೊಲೀಸ್ ಕಾನ್ಸ್ ​ಟೇಬಲ್​ ಹುದ್ದೆಗಳು ಖಾಲಿ- ಗೃಹ ಸಚಿವ ಅರಗ ಜ್ಞಾನೇಂದ್ರ. ಬೆಂಗಳೂರು,ಸೆಪ್ಟಂಬರ್,20,2022(..):ರಾಜ್ಯದಲ್ಲಿ 9,432 ಪೊಲೀಸ್ ಕಾನ್ಸ್​ ಟೇಬಲ್​ ಹುದ್ದೆಗಳು ಖಾಲಿ ಇದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು. ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಪೊಲೀಸ್​ ಕಾನ್ಸ್‌ ಟೇಬಲ್​​ಗಳ ನೇಮಕಾತಿ ವಿಳಂಬ ಬಗ್ಗೆ ಹಾಸನ ಶಾಸಕ ಪ್ರೀತಮ್ ಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ, 9,432 ಪೊಲೀಸ್ ಕಾನ್ಸ್​ಟೇಬಲ್​ ಹುದ್ದೆಗಳು ಖಾಲಿ ಇವೆ. ಈಗ 3,500 ಕಾನ್ಸ್​ಟೇಬಲ್​​ ನೇಮಕಕ್ಕೆ ನೋಟಿಫಿಕೇಷನ್ ಆಗಿದೆ ಎಂದರು. ವಯೋಮಿತಿ ಸಡಿಲಿಕೆ ಮಾಡಿ ಎಂಬ ಹೆಬ್ಬಾಳ್ಕರ್ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ, ವಯೋಮಿತಿ 2 ವರ್ಷ ಸಡಿಲಿಕೆಗೆ ಮನವಿ ಇದೆ. ಯುವಕರನ್ನೇ ಹುದ್ದೆಗೆ ಆಯ್ಕೆ ಮಾಡಬೇಕು ಹೀಗಾಗಿ ವಯೋಮಿತಿ ಸಡಿಲಿಕೆ ಇಲ್ಲ ಎಂದು ತಿಳಿಸಿದರು. : 9,432 - –- – .