ನ್ಯಾಯಾಂಗದ ಮೇಲೆ ಸಂಪೂರ್ಣ ವಿಶ್ವಾಸ: ನಿಷ್ಕಳಂಕಿತನಾಗಿ ಹೊರಬರುತ್ತೇನೆ- ಮಾಜಿ ಸಿಎಂ ಬಿಎಸ್ ವೈ. ಬೆಂಗಳೂರು,ಸೆಪ್ಟಂಬರ್,19,2022(..):ತಮ್ಮ ವಿರುದ್ಧ ದಾಖಲಾಗಿರುವ ಎಫ್ ಐ ಆರ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ನನಗೆ ನ್ಯಾಯಾಂಗದ ಮೇಲೆ ಸಂಪೂರ್ಣ ವಿಶ್ವಾಸವಿದೆ. ನಿಷ್ಕಳಂಕಿತನಾಗಿ ಹೊರಬರುತ್ತೇನೆ ಎಂದಿದ್ದಾರೆ. ಕಾರ್ಯ ನಿಮಿತ್ತ ಸಕಲೇಶಪುರಕ್ಕೆ ತೆರಳುತ್ತಿದ್ದ ಮಾಜಿ ಸಿಎಂ ಬಿಎಸ್ ವೈ ಇದಕ್ಕೂ ಮುನ್ನ ಮಾಧ್ಯಮಗಳ ಜತೆ ಮಾತನಾಡಿದರು. ಪ್ರಕರಣದ ನ್ಯಾಯಾಲಯದಲ್ಲಿದೆ, ನ್ಯಾಯಾಂಗದ ಮೇಲೆ ನನಗೆ ಸಂಪೂರ್ಣ ಭರವಸೆ ಇದೆ, ನಿಷ್ಕಳಂಕಿತನಾಗಿ ಹೊರ ಬರುವ ವಿಶ್ವಾಸವೂ ಇದೆ ಎಂದು ಬಿಎಸ್ ವೈ ವಿಶ್ವಾಸ ವ್ಯಕ್ತಪಡಿಸಿದರು. : - – - - .