ದೇಶದಲ್ಲಿ ಮತ್ತೆ ಚೀತಾಗಳ ಯುಗಾರಂಭ: ನಮೀಬಿಯಾದಿಂದ ಭಾರತಕ್ಕೆ ಬಂದ 8 ಚೀತಾಗಳು. ಮಧ್ಯಪ್ರದೇಶ,ಸೆಪ್ಟಂಬರ್,17,2022(..):70 ವರ್ಷಗಳ ನಂತರ ಭಾರತಕ್ಕೆ 8 ಚೀತಾಗಳು ಬಂದಿದ್ದು ದೇಶದಲ್ಲಿ ಮತ್ತೆ ಚೀತಾಗಳ ಯುಗಾರಂಭವಾಗಿದೆ. ನಮೀಬಿಯಾದಿಂದ ಎಂಟು ಚೀತಾಗಳು ವಿಶೇಷ ವಿಮಾನದಲ್ಲಿ ಭಾರತಕ್ಕೆ ಆಗಮಿಸಿವೆ. ಮಧ್ಯಪ್ರದೇಶದ ಗ್ವಾಲಿಯರ್‌ ಗೆ ಇಂದು ಬೆಳಗ್ಗೆ ಬಂದು ಇಳಿದಿದ್ದು ಈ ಚೀತಾಗಳನ್ನ ಮಧ್ಯಪ್ರದೇಶ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡಲಾಗುತ್ತದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವಾಗಿದ್ದು, ಈ ಅಂಗವಾಗಿ ಇಂದು 8 ಚೀತಾಗಗಳನ್ನ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾಗಳನ್ನು ಬಿಡಲಿದ್ದಾರೆ. 3 ಗಂಡು ಮತ್ತು 5 ಹೆಣ್ಣು ಚೀತಾಗಳಿವೆ. : 8 - – –-