ಮತಾಂತರ ನಿಷೇಧ ಕಾಯ್ದೆಯಿಂದ ಯಾವ ಧರ್ಮಕ್ಕೂ ತೊಂದರೆ ಇಲ್ಲ- ಗೃಹ ಸಚಿವ ಅರಗ ಜ್ಞಾನೇಂದ್ರ. ಬೆಂಗಳೂರು,ಸೆಪ್ಟಂಬರ್,16,2022(..):ಮತಾಂತರ ನಿಷೇಧ ಕಾಯ್ದೆಯಿಂದ ಯಾವ ಧರ್ಮಕ್ಕೂ ತೊಂದರೆಯಾಗಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ. ಈ ಕುರಿತು ಇಂದು ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಮತಾಂತರ ನಿಷೇಧ ಕಾಯ್ದೆ ಪಾಸ್ ಆಗಿದೆ ವಿಧಾನಸಭೆಯಲ್ಲಿ ಅಂಗೀಕಾರ ಆಗತ್ತು. ನಿನ್ನೆ ಪರಿಷತ್ ನಲ್ಲೂ ಅಂಗೀಕಾರವಾಗಿದೆ ರಾಜ್ಯಪಾಲರು ಸಹಿ ಹಾಕಿದರ ಕಾನೂನು ಆಗಲಿದೆ. ವಿಧೇಯಕ ಮಂಡನೆ ನನ್ನ ಜಿವನದ ಅಪೂರ್ವ ದಿನ ಎಂದರು. ಹಿಂದೂ ಸಂಸ್ಕೃತಿ ಅಲ್ಲಾಡಿಸುವ ಕೆಲಸ ಆಗುತ್ತಿತ್ತು. ದೇಶದಲ್ಲಿ ಸ್ವಾತಂತ್ರ ದುರುಪಯೋಗವಾಗುತ್ತಿತ್ತು . ಮತಾಂತರ ನಿಷೇಧಕ್ಕೆ ಬಿಗಿ ಕಾಯ್ದೆ ತರಲಾಗಿದೆ. ಕಾಯ್ದೆಯಿಂದ ಯಾವ ಧರ್ಮಕ್ಕೂ ತೊಂದರೆ ಇಲ್ಲ ಎಂದು ಅರಗ ಜ್ಞಾನೇಂದ್ರ ತಿಳಿಸಿದರು. : - – – – - .