ವಿಧಾನಪರಿಷತ್ ಸಭಾಪತಿ ಚುನಾವಣೆ: ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯಕ್ಕೆ ಬ್ರೇಕ್. ಬೆಂಗಳೂರು,ಸೆಪ್ಟಂಬರ್,15,2022(..):ವಿಧಾನಪರಿಷತ್ ನೂತನ ಸಭಾಪತಿ ಚುನಾವಣೆ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡಿದ್ಧ ನಿರ್ಣಯಕ್ಕೆ ತಡೆ ನೀಡಲಾಗಿದ್ದು ಈ ಹಿನ್ನೆಲೆಯಲ್ಲಿ ನೂತನ ಸಭಾಪತಿ ಚುನಾವಣೆಗೆ ಬ್ರೇಕ್ ಬಿದ್ದಿದೆ. ಸಭಾಪತಿ ಚುನಾವಣೆ ಮಾಡದಿರಲು ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ಪಕ್ಷದ ನಾಯಕರ ಸಲಹೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ನೂತನ ಸಭಾಪತಿ ಚುನಾವಣೆಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಇಂದು ಭೇಟಿಯಾಗಿ . ಚುನಾವಣೆಗೆ ಅಧಿಸೂಚನೆ ಹೊರಡಿಸಲು ಶಿಫಾರಸು ಮಾಡಬೇಕಿತ್ತು. ಆದರೆ ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯಪಾಲರ ಭೇಟಿ ಮುಂದೂಡಿದ್ದಾರೆ. : – – -