ಶಾಸಕರನ್ನ ಬಿಟ್ಟು ದಿಶಾ ಸಭೆ ನಡೆಸುವುದು ಸೂಕ್ತವಲ್ಲ- ಶಾಸಕ ಅನ್ನದಾನಿ ಆಕ್ಷೇಪ. ಬೆಂಗಳೂರು,ಸೆಪ್ಟಂಬರ್,16,2022(..):ಶಾಸಕರನ್ನ ಬಿಟ್ಟು ದಿಶಾ ಸಭೆ ನಡೆಸುವುದು ಸೂಕ್ತವಲ್ಲ ಎಂದು ಮಳವಳ್ಳಿ ಜೆಡಿಎಸ್ ಶಾಸಕ ಅನ್ನದಾನಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಇಂದು ಮಾತನಾಡಿದ ಶಾಸಕ ಅನ್ನದಾನಿ, ಅನೌಪಚಾರಿಕವಾಗಿ ದಿಶಾ ಸಭೆ ಕರೆದಿರುವ ಬಗ್ಗೆ ಮಾಹಿತಿ ಬಂತು . ಅಧೀವೇಶನ ನಡೆಯುವಾಗ ಯಾಕೆ ದಿಶಾ ಸಭೆ ಮಾಡ್ತಿದ್ದಾರೆ. ನಾವೆಲ್ಲಾ ದಿಶಾ ಸಭೆಯ ಸದಸ್ಯರು. ಸದಸ್ಯರನ್ನ ಬಿಟ್ಟು ಸಭೆ ನಡೆಸುವುದು ಸೂಕ್ತ ಅಲ್ಲ. ದಿಶಾ ಸಭೆ ಮುಂದೂಡುವಂತೆ ಜಿಲ್ಲಾಧಿಕಾರಿಗೆ ಹೇಳಿದ್ದೇನೆ ಚರ್ಚೆ ಮಾಡಿ ತಿಳಿಸುವುದಾಗಿ ಜಿಲ್ಲಾಧಿಕಾರಿ ಹೇಳಿದ್ದಾರೆ. : –- - – - -.