ಈ ಬಾರಿ ದಸರಾದಲ್ಲಿ ಹೆಚ್ಚುವರಿ ದೀಪಾಲಂಕಾರ: ವಿದ್ಯುತ್ ದೀಪಗಳಲ್ಲಿ ಜಗಮಗಿಸಲಿದ್ದಾರೆ ನಟ ಪುನೀತ್ ರಾಜಕುಮಾರ್ ಮೈಸೂರು ,ಸೆಪ್ಟಂಬರ್,15,2022(..):ವಿಶ್ವ ವಿಖ್ಯಾತ ಮೈಸೂರು ದಸರಾ ಆರಂಭಕ್ಕೆ ಕೆಲವೇ ದಿನಗಳ ಬಾಕಿಯಿದ್ದು ಸಕಲ ಸಿದ್ಧತೆ ನಡೆಯುತ್ತಿದೆ. ಈ ನಡುವೆ ಈ ಬಾರಿ ಅದ್ಧೂರಿಯಾಗಿ ದಸರಾ ಆಚರಣೆಗೆ ಸರ್ಕಾರ ಮುಂದಾಗಿದ್ದು, ಅರಮನೆ ನಗರಿ ಮೈಸೂರು ವಿದ್ಯುತ್ ದೀಪಗಳಿಂದ ಜಗಮಗಿಸಲಿದೆ. ಕಳೆದ ಸಾಲಿಗಿಂತ ಈ ಬಾರಿ ಹೆಚ್ಚುವರಿಯಾಗಿ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದ್ದು, ದೀಪಾಲಂಕಾರ ವೀಕ್ಷಣೆಯ ಅವಧಿಯೂ ವಿಸ್ತರಣೆಯಾಗಲಿದೆ. ಈ ಕುರಿತು ಸಭೆ ಬಳಿಕ ಮಾತನಾಡಿ ಮಾಹಿತಿ ನೀಡಿದ ಸಂಸದ ಪ್ರತಾಪ್ ಸಿಂಹ, ಈ ಬಾರಿ ಒಟ್ಟು 124 ಕಿ ಮೀ ರಸ್ತೆಯಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತದೆ. 96 ವೃತ್ತಗಳಲ್ಲಿ ವಿಶೇಷ ದೀಪಾಲಂಕಾರವಿರಲಿದೆ. ಕಳೆದ ವರ್ಷ ನಿಧನರಾದ ಸ್ಯಾಂಡಲ್ ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ವಿದ್ಯುತ್ ದೀಪಗಳಲ್ಲಿ ಜಗಮಗಿಸಲಿದ್ದಾರೆ. ಪುನಿತ್ ರಾಜಕುಮಾರ್ ಸೇರಿದಂತೆ 28 ವಿವಿಧ ಬಗೆಯ ಪ್ರತಿಕೃತಿಗಳು ಈ ಬಾರಿಯ ದಸರಾ ದೀಪಾಲಂಕಾರದ ಹೈಲೈಟ್ಸ್ ಆಗಿರಲಿವೆ ಎಂದು ತಿಳಿಸಿದರು. ಇನ್ನು ರಾತ್ರಿ 7 ಗಂಟೆಯಿಂದ 10:30ರವರೆಗೂ ವಿದ್ಯುತ್ ದೀಪಾಲಂಕಾರ ವೀಕ್ಷಣೆಗೆ ಅವಕಾಶವಿದ್ದು, ರಾತ್ರಿ 11ರವರೆಗೂ ವಿಸ್ತರಣೆ ಮಾಡಲು ಚಿಂತನೆ ನಡೆಸಲಾಗಿದೆ. ಮೈಸೂರಿಗೆ ಸಂಪರ್ಕ ಕಲ್ಪಿಸುವ ಸ್ಥಳಗಳಲ್ಲಿ ವಿದ್ಯುತ್ ದೀಪಗಳಿಂದ ದ್ವಾರಗಳ‌ ನಿರ್ಮಾಣ, ವಿಮಾನ ನಿಲ್ದಾಣದಿಂದ ಮೈಸೂರಿನವರೆಗೂ ವಿಶೇಷ ದೀಪಾಲಂಕಾರ ಮಾಡಲಾಗುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು. : -- - … : , 15, 2022 (..): . . . . . , 124 . 96 . ’ , , . ’ , 28 , . 7.00 10.30 . 11.00 . . .: / /