ಒಟಿಟಿ ಬಳಿಕ ಫಿಕ್ಸ್ ಆಯ್ತು ಬಿಗ್ ಬಾಸ್ ಸೀಸನ್ 9 ಬೆಂಗಳೂರು, ಸೆಪ್ಟೆಂಬರ್ 15, 2022 (..): ಸೆಪ್ಟೆಂಬರ್ 25ರಿಂದ ಬಿಗ್ ಬಾಸ್ 9ನೇ ಸೀಸನ್ ಪ್ರಸಾರವಾಗಲಿದೆ ಎಂಬ ಸುದ್ದಿ ಹೊರಬಿದ್ದಿದೆ. ಅಂದಹಾಗೆ ಓಟಿಟಿಯಲ್ಲಿ ಬಿಗ್ ಬಾಸ್ ಶೋ ಸಂಚಲನ ಮೂಡಿಸುತ್ತಿದೆ. ಬೇರೆ ಬೇರೆ ಕ್ಷೇತ್ರದಿಂದ ಸ್ರ‍್ಧಿಗಳ ಆಯ್ಕೆ ನಡೆದಿದೆ. ಸಾಕಷ್ಟು ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಬಿಗ್ ಬಾಸ್ 9ನೇ ಸೀಸನ್ ಸೆಪ್ಟೆಂಬರ್ 25ಕ್ಕೆ ಪ್ರಸಾರವಾಗಲಿದೆ. ಬಿಗ್ ಬಾಸ್ ಒಟಿಟಿಯಲ್ಲಿ ಸೋನು ಶ್ರೀನಿವಾಸ್ ಗೌಡ, ಸಾನ್ಯ ಅಯ್ಯರ್, ರೂಪೇಶ್ ಶೆಟ್ಟಿ, ಸೋಮಣ್ಣ, ಜಶ್ವಂತ್, ನಂದು, ಜಯಶ್ರೀ ಇತರರು ಗಮನ ಸೆಳೆದಿದ್ದಾರೆ. ಈ ಪೈಕಿ ಕೆಲವರು ಬಿಗ್ ಬಾಸ್ ಹೊಸ ಸೀಸನ್‌ನಲ್ಲಿ ಭಾಗವಹಿಸಲಿದ್ದಾರೆ.