ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ಧ ದರೋಡೆಕೋರರಿಗೆ ಸ್ಥಳೀಯರಿಂದ ಬಿತ್ತು ಧರ್ಮದೇಟು.. ಮಂಡ್ಯ,ಸೆಪ್ಟಂಬರ್,15,2022(..):ದರೋಡೆಗೆ ಯತ್ನಿಸಿದ ದರೋಡೆಕೋರರನ್ನ ಗ್ರಾಮಸ್ಥರು ಹಿಡಿದು ಧರ್ಮದೇಟು ನೀಡಿರುವ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಬನ್ನಘಟ್ಟ ಗ್ರಾಮದಲ್ಲಿ ನಡೆದಿದೆ. ಇನ್ನೋವಾ ಕಾರಿನಲ್ಲಿ ಬಂದಿದ್ದ ನಾಲ್ವರು ದರೋಡೆಕೋರರು ಕೈಯಲ್ಲಿ ಗನ್ ಹಿಡಿದು ಕಾರು ಅಡ್ಡಗಟ್ಟಿ ದರೋಡೆಗೆ ಯತ್ನಿಸಿದ್ದರು. ಈ ವೇಳೆ ಕಾರು ಚಾಲಕನ ಕೂಗಾಟ ಕೇಳಿ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ್ದಾರೆ. ಗ್ರಾಮಸ್ಥರ ಸುತಯ್ತವರೆಯುತ್ತಿದ್ದಂತೆ ದರೋಡೆಕೋರರು ಪರಾರಿಯಾಗಲು ಯತ್ನಿಸಿದ್ದು, ಇಬ್ಬರನ್ನ ಹಿಡಿದು ಗ್ರಾಮದ ಜನರು ಥಳಿಸಿದ್ದಾರೆ. ಮರಕ್ಕೆ ಕಟ್ಟಿ ಹಾಕಿ ಗನ್ ಕಿತ್ತುಕೊಂಡು ಥಳಿಸಿದ್ದಾರೆ. ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. : - - - --.