ಕನ್ನಡ ರಕ್ಷಣೆಗೆ ಸರ್ಕಾರ ಬದ್ಧ: ಯಾವುದೇ ಆತಂಕ ಬೇಡ- ಸಿಎಂ ಬೊಮ್ಮಾಯಿ ಬೆಂಗಳೂರು,ಸೆಪ್ಟಂಬರ್,14,2022(..):ಕನ್ನಡ ರಕ್ಷಣೆಗೆ ಸರ್ಕಾರ ಬದ್ಧ. ಯಾವುದೇ ಆತಂಕ ಬೇಡ ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ಹಿಂದಿ ದಿವಸ್ ಆಚರಣೆಗೆ ವಿರೋಧ ಪಕ್ಷಗಳಿಂದ ವಿರೋಧ ಹಿನ್ನೆಲೆ ಈ ಕುರಿತು ಸದನದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕನ್ನಡ ರಕ್ಷಣೆಗೆ ಸರ್ಕಾರ ಬದ್ಧ. ಯಾವುದೇ ಆತಂಕ ಬೇಡ. ನೆಲ,ಜಲ, ಭಾಷೆ ವಿಚಾರದಲ್ಲಿ ರಾಜಕೀಯ ಮೀರಿ ನಡೆದುಕೊಂಡಿದ್ದೇವೆ . ಕನ್ನಡ ಕಡ್ಡಾಯಗೊಳಿಸಲು ಹೊಸ ಕಾನೂನು ತರುತ್ತೇವೆ . ಇದೇ ಅಧೀವೇಶನದಲ್ಲಿ ಹೊಸ ಕಾನೂನು ಜಾರಿ ಮಾಡುತ್ತೇವೆ. ಕನ್ನಡದಲ್ಲೇ ಇಂಜಿನಿಯರಿಂಗ್ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ ಎಂದರು. : – – - -