ಹೃದಯಾ‍‍ಘಾತದಿಂದ ಕರ್ತವ್ಯನಿರತ ಯೋಧ ಸಾವು. ಮಹಾರಾಷ್ಟ್ರ,ಸೆಪ್ಟಂಬರ್,14,2022(..):ಹೃದಯಾಘಾತದಿಂದ ಕರ್ತವ್ಯ ನಿರತ ಯೋಧ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ಈ ಘಟನೆ ನಡೆದಿದೆ. ಶಂಕರ ಯಲಿಗಾರ (33) ಮೃತಪಟ್ಟವರು. ಶಂಕರ ಅವರು ಬೆಳಗಾವಿ ಜಿಲ್ಲೆ ಗೋಕಾಕ್ ತಾಲ್ಲೂಕಿನ ಮೆಲ್ಮಟ್ಟಿ ಗ್ರಾಮದವರಾಗಿದ್ದು ಕಳೆದ 13 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇಂದು ಸ್ವಗ್ರಾಮ ಮೆಲ್ಮಟ್ಟಿಗೆ ಮೃತ ಯೋಧ ಶಂಕರ್ ಅವರ ಪಾರ್ಥೀವ ಶರೀರ ಬರಲಿದೆ. : -- - - .