ನವೆಂಬರ್ 11ಕ್ಕೆ ಡಾರ್ಲಿಂಗ್ ಕೃಷ್ಣ ‘ದಿಲ್ ಪಸಂದ್’ ರಿಲೀಸ್ ಬೆಂಗಳೂರು, ಸೆಪ್ಟೆಂಬರ್ 14, 2022 (..):ಡಾರ್ಲಿಂಗ್ ಕೃಷ್ಣ ನಟನೆಯ ” ದಿಲ್ ಪಸಂದ್” ಚಿತ್ರ ನವೆಂಬರ್ 11ರಂದು ಬಿಡುಗಡೆಯಾಗುತ್ತಿದೆ. ಈ ತಿಂಗಳ ಕೊನೆಗೆ ಟೀಸರ್ ಬಿಡುಗಡೆಯಾಗುವ ಸಾಧ್ಯತೆಯಿದೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದೆ. ಡಾರ್ಲಿಂಗ್ ಕೃಷ್ಣಗೆ ನಿಶ್ವಿಕಾ‌ ನಾಯ್ಡು ನಾಯಕಿ ಆಗಿ ಅಭಿನಯಿಸಿದ್ದಾರೆ. ಮೇಘ ಶೆಟ್ಟಿ, ಸಾಧು ಕೋಕಿಲ, ರಂಗಾಯಣ ರಘು, ತಬಲ ನಾಣಿ, ಗಿರಿ, ಅರುಣಾ ಬಾಲರಾಜ್ ಸೇರಿ ಪ್ರಮುಖ ನಟರು ಚಿತ್ರದಲ್ಲಿದ್ದಾರೆ. ಅಂದಹಾಗೆ ರಶ್ಮಿ ಫಿಲಂಸ್ ಲಾಂಛನದಲ್ಲಿ ಸುಮಂತ್ ಕ್ರಾಂತಿ ಅವರು ನಿರ್ಮಿಸಿರುವ ಈ ಚಿತ್ರವನ್ನು ಶಿವತೇಜಸ್ ನಿರ್ದೇಶಿಸಿದ್ದಾರೆ.