ಕಾಲುವೆಗೆ ಆಟೋ ಪಲ್ಟಿಯಾಗಿ ಇಬ್ಬರು ಕೂಲಿ ಕಾರ್ಮಿಕರು ಸಾವು. ಬಳ್ಳಾರಿ,ಸೆಪ್ಟಂಬರ್,14,2022(..):ಕಾಲುವೆಗೆ ಆಟೋ ಪಲ್ಟಿಯಾಗಿ ಇಬ್ಬರು ಕೂಲಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಬಳ್ಳಾರಿ ತಾಲ್ಲೂಕಿನ ಕೊಳಗಲ್ ಬಳಿ ಈ ಘಟನೆ ನಡೆದಿದೆ. ಕೊಳಗಲ್ ಗ್ರಾಮದಿಂದ ಆಟೋದಲ್ಲಿ 9 ಮಂದಿ ಕೂಲಿ ಕೆಲಸಕ್ಕಾಗಿ ತೆರಳುತ್ತಿದ್ದರು. ಈ ವೇಳೆ ತುಂಗಾಭದ್ರ ಕಾಲುವೆ ಬಳಿ ಆಟೋ ಪಲ್ಟಿಯಾಗಿ ಈ ಘಟನೆ ಸಂಭವಿಸಿದೆ. ಇಬ್ಬರ ಮೃತದೇಹ ಪತ್ತೆಯಾಗಿದ್ದು, ನೀರು ಪಾಲದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. : - – - – .