ಮುಡಾ ಹಗರಣ: ಮೊದಲು ಯತ್ನಾಳ್ ಆರೋಪದ ಬಗ್ಗೆ ಬಿಜೆಪಿ ಉತ್ತರಿಸಲಿ- ಸಚಿವ ಎಂ.ಬಿ ಪಾಟೀಲ್ ವಿಜಯಪುರ,ಜುಲೈ,28,2024 (..):ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಿರುವ ಬಿಜೆಪಿ ನಾಯಕರು ಮೊದಲು ಕೋವಿಡ್ ಹಗರಣದ ಬಗ್ಗೆ ನಿಮ್ಮ ಪಕ್ಷದವರೇ ಆದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪದ ಬಗ್ಗೆ ಉತ್ತರಿಸಲಿ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಟಾಂಗ್ ಕೊಟ್ಟರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಮುಡಾ ಹಗರಣದ ಬಗ್ಗೆ ಮಾತನಾಡುವ ಬದಲು ಬಿಜೆಪಿ ಕಾಲದ ಹಗರಣಗಳ ಬಗ್ಗೆ ಮಾತನಾಡಲಿ. ಕೋವಿಡ್ ಹಗರಣದ ಬಗ್ಗೆ ಮಾತನಾಡಲಿ ಕೋವಿಡ್ ಹಗರಣದ ಬಗ್ಗೆ ಯತ್ನಾಳ್ ಹೇಳಿದ್ದಾರೆ. ಯತ್ನಾಳ್ ಆರೋಪದ ಬಗ್ಗೆ ಬಿಜೆಪಿ ಉತ್ತರಿಸಲಿ ಎಂದರು. ಬಿಎಸ್ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ಮಾರಿಷಸ್ ನಲ್ಲಿ 10 ಸಾವಿರ ಕೋಟಿ ರೂ. ಹಣ ಇರಿಸಿದ್ದಾರೆಂದು ಬಿಜೆಪಿ ಪಕ್ಷದ ಹಿರಿಯ ಶಾಸಕ ಯತ್ನಾಳ್ ಆರೋಪ ಮಾಡಿದ್ದಾರೆ. ಈ ಬಗ್ಗೆ ಉತ್ತರ ನೀಡಿದ ಬಳಿಕ ವಿಜಯೇಂದ್ರ ನಮ್ಮ ಪಕ್ಷದ ವಿರುದ್ಧ ಪಾದಯಾತ್ರೆ ಹೋರಾಟ ಮಾಡಲಿ ಎಂದು‌ ಕುಟುಕಿದರು. : , , , ,