ರಾಣಿ 2ನೇ ಎಲಿಜಬೆತ್ ನಿಧನಕ್ಕೆ ಬೆಂಗಳೂರಿನ ಬ್ರಿಟಿಷ್ ಡೆಪ್ಯೂಟಿ ಹೈಕಮಿಷನ್ ಸಂತಾಪ. ಬೆಂಗಳೂರು,ಸೆಪ್ಟಂಬರ್,10,2022(..):ಬೆಂಗಳೂರಿನ ಬ್ರಿಟಿಷ್ ಡೆಪ್ಯೂಟಿ ಹೈಕಮಿಷನ್, ಸೆಪ್ಟೆಂಬರ್ 8ರಂದು ನಿಧನರಾದ ರಾಣಿ ಎಲಿಜಬೆತ್ ಅವರಿಗೆ ಸಂತಾಪವನ್ನು ವ್ಯಕ್ತಪಡಿಸಿದೆ. ಡೆಪ್ಯೂಟಿ ಹೈ ಕಮೀಷನರ್ ಅವರ ನಿವಾಸದಲ್ಲಿ (6ನೇ ಮಹಡಿ, ಪ್ರೆಸ್ಟೀಜ್ ಹೆರಮಿಟೇಜ್, ಕೆನ್ಸಿಂಗ್ಟನ್ ರಸ್ತೆ, ಹಲಸೂರು, ಬೆಂಗಳೂರು) ಇಲ್ಲಿ ಸಂತಾಪ ಸೂಚಿಸುವ ಒಂದು ಪುಸ್ತಕವನ್ನು ಈ ಕೆಳಕಂಡ ದಿನಾಂಕ ಹಾಗೂ ಸಮಯದಲ್ಲಿ ತೆರೆದಿರುತ್ತದೆ. ಶುಕ್ರವಾರ, 9 ಸೆಪ್ಟೆಂಬರ್ 2 ಗಂಟೆಯಿದ ಸಂಜೆ 7ಗಂಟೆಯವರೆಗೆ 10 ಸೆಪ್ಟೆಂಬರ್ ಶನಿವಾರ, ಬೆಳಿಗ್ಗೆ 10 ಗಂಟೆಯಿಂದ-ಸಂಜೆ ಗಂಟೆಯವರೆಗೆ. ಸೋಮವಾರ, 12ನೇ ಸೆಪ್ಟೆಂಬರ್ ನಿಂದ ಶುಕ್ರವಾರ 16ನೇ ಸೆಪ್ಟೆಂಬರ್, ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ, ರಾಣಿ ಎಲಿಜಬೆತ್ ನಿಧನಕ್ಕೆ ಸಂತಾಪ ಸೂಚಿಸಲು ಬಯಸುವವರಿಗೆ ಇಂಟೆರ್ನೆಟ್ ನಲ್ಲೂ ಒಂದು ಸಂತಾಪ ಸೂಚಿಸುವ ವ್ಯವಸ್ಥೆಯನ್ನು ಕಲ್ಪಿಸಿದೆ. ದಯಮಾಡಿ ಭೇಟಿ ನೀಡಿ:://../-- : - - - –- - -