ಜನರು ಕಷ್ಟದಲ್ಲಿದ್ದಾಗ ಸಿದ್ಧರಾಮಯ್ಯ ಲಾಭ ಪಡೆಯುವ ಕೆಲಸ ಮಾಡಬಾರದು- ಗೃಹ ಸಚಿವ ಅರಗ ಜ್ಞಾನೇಂದ್ರ. ಬೆಂಗಳೂರು,ಸೆಪ್ಟಂಬರ್,8,2022(..):ಬೆಂಗಳೂರಿನಲ್ಲಿ ಮಳೆಯಿಂದಾಗಿ ಜನರು ಸಂಕಷ್ಟದಲ್ಲಿದ್ದಾರೆ. ಈ ವೇಳೆ ಲಾಭ ಪಡೆಯುವ ಕೆಲಸವನ್ನ ಸಿದ್ಧರಾಮಯ್ಯ ಮಾಡಬಾರದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು. ವಿಪಕ್ಷ ಸಿದ್ಧರಾಮಯ್ಯ ನೆರೆ ಹಾನಿ ಪ್ರದೇಶಕ್ಕೆ ಭೇಟಿ ಬೆನ್ನಲ್ಲೆ ಗೃಹ ಸಚಿವ ಅರಗ ಜ್ಞಾನೇಂದ್ರ ಸಹ ನೆರೆಹಾನಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಪ್ರಕೃತಿ ವಿಕೋಪವಾಗಿದೆ. ಬಹಳಷ್ಟು ಮನೆಗಳು ಜಲಾವೃತವಾಗಿವೆ. ಮಳೆಗೆ ಅನೇಕ ಕುಟಂಬಗಳು ಕಷ್ಟ ಅನುಭವಿಸಿದ್ದಾರೆ. ಜನರು ಕಷ್ಟದಲ್ಲಿದ್ದಾಗ ರಾಜಕೀಯ ಮಾಡಬಾರದು. ಲಾಭ ಪಡೆಯುವ ಕೆಲಸ ಸಿದ್ಧರಾಮಯ್ಯ ಮಾಡಬಾರದು. ಸರ್ಕಾರಕ್ಕೆ ಸಿದ್ಧರಾಮಯ್ಯ ಸಲಹೆ ಕೊಡಬೇಕು ಎಂದು ಹೇಳಿದರು. : – –-- – .