ನಿರಂತರ ಮಳೆಗೆ 200 ವರ್ಷಗಳ ಹಳೆಯ ಗರಡಿ ಮನೆ ಕುಸಿತ. ನಂಜನಗೂಡು,ಸೆಪ್ಟಂಬರ್,7,2022(..):ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ನಂಜ ನಗೂಡು ಪಟ್ಟಣದ ಶ್ರೀರಾಂಪುರ ಬಡಾವಣೆಯ 200 ವರ್ಷಗಳ ಹಳೆಯ ಗರಡಿಮನೆ ಕುಸಿದು ಬಿದ್ದಿದೆ. ಬೆಳಿಗ್ಗೆ ಈ ಅವಘಡ ಸಂಭವಿಸಿದ್ದು, ಆ ಸಮಯದಲ್ಲಿ ಗರಡಿ ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇಲ್ಲಿ ನಿರಂತರವಾಗಿ ಕುಸ್ತಿ ಪಟುಗಳ ಕಸರತ್ತು ನಡೆಸುತ್ತಿದ್ದು, ಮಹಾರಾಜರ ಆಳ್ವಿಕೆಯ ಕಾಲದಿಂದಲೂ ರಾಜಾಶ್ರಯ ಪಡೆದು ನಡೆದು ಕೊಂಡು ಬರುತ್ತಿದ್ದ ಈ ಗರಡಿ ಮನೆ ನೂರಾರು ಕುಸ್ತಿಪಟುಗಳನ್ನು ಸಿದ್ದಪಡಿಸಿದ ಹೆಗ್ಗಳಿಕೆ ಹೊಂದಿದೆ. ಇದೀಗ ಗರಡಿ ಮನೆ ಕುಸಿದು ಬಿದ್ದಿದ್ದು, ಸರ್ಕಾರ ಇತ್ತ ಕಡೆ ಗಮನಹರಿಸಿ ಪುನರ್ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕುಸ್ತಿ ಪ್ರಿಯರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ. : 200 - - - – .