ಬಿಜೆಪಿ ತಮ್ಮ ಹಗರಣ ಮುಚ್ಚಿಡಲು ಪಾದಯಾತ್ರೆಗೆ ಮುಂದಾಗಿದ್ದಾರೆ-ಸಚಿವ ಈಶ್ವರ್ ಖಂಡ್ರೆ ಬೆಂಗಳೂರು,ಜುಲೈ,27,2024 (..):ಮುಡಾ ಹಗರಣ ಸಂಬಂಧ ಪಾದಯಾತ್ರೆಗೆ ಮುಂದಾಗಿರುವ ಬಿಜೆಪಿ, ಜೆಡಿಎಸ್ ಗೆ ತಿರುಗೇಟು ನೀಡಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಬಿಜೆಪಿಯು ತಮ್ಮ ಹಗರಣಗಳನ್ನ ಮುಚ್ಚಿಡಲು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ. ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ಬಿಜೆಪಿ ಯಾವ ಆಧಾರದ ಮೇಲೆ ಪಾದಯಾತ್ರೆ ಮಾಡುತ್ತಿದೆ. ಬಿಜೆಪಿ ಹಗರಣ ಮಚ್ಚಿಡಲು ಪಾದಯಾತ್ರೆಗೆ ಮುಂದಾಗಿದೆ. ಸಿಎಂ ಸಿದ್ದರಾಮಯ್ಯರಿಗೆ ಒಂದು ಕಪ್ಪು ಚುಕ್ಕೆ ಇಲ್ಲ. ಜನಸಮುದಾಯದ ಅಪರೂಪದ ರಾಜಕಾರಣಿ ಅಂದರೆ ಅದು ಸಿಎಂ ಸಿದ್ದರಾಮಯ್ಯ ಎಂದರು. ಇನ್ನು ವಾಲ್ಮೀಕಿ ಹಗರಣ ಮುಚ್ಚಲು ನೋಡಿದ್ವಾ. ಈಗಾಗಲೇ ತನಿಖೆಗೆ ಆದೇಶ ಮಾಡಲಾಗಿದೆ ಬಿಜೆಪಿ ಪಾದಯಾತ್ರೆಯಿಂದ ಏನು ಆಗಲ್ಲ ಎಂದರು. : , , ,