ಮಹಿಳೆಗೆ ನಿಂದನೆ ಆರೋಪ: ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ. ಬೆಂಗಳೂರು,ಸೆಪ್ಟಂಬರ್,3,2022(..):ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಯ ಮೇಲೆ ದರ್ಪ ತೋರಿದ ಆರೋಪ ಹಿನ್ನೆಲೆ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ರಾಜ್ಯ ಕಾಂಗ್ರೆಸ್ ಘಟಕ ಟ್ವೀಟ್ ಮಾಡಿ ವಾಗ್ದಾಳಿ ನಡೆಸಿದೆ. ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಯ ಮೇಲೆ ದರ್ಪ ತೋರಿದ ಶಾಸಕ ಲಿಂಬಾವಳಿಯ ವರ್ತನೆ ಬಿಜೆಪಿಯ ಜನವಿರೋಧಿ ಧೋರಣೆಯಾಗಿದೆ. ದುರಹಂಕಾರದ ಪರಮಾವಧಿಗೆ ತಲುಪಿರುವುದಕ್ಕೆ ಸಾಕ್ಷಿ ಎಂದು ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ಕೆಪಿಸಿಸಿ ಟ್ವೀಟ್ ಮೂಲಕ ಕಿಡಿಕಾರಿದೆ. ಜನತೆಯ ಮೇಲೆ ದರ್ಪ ತೋರಿದ ಮಾತ್ರಕ್ಕೆ ನಿಮ್ಮ ಅಯೋಗ್ಯತನ ಮರೆಯಾಗುವುದಿಲ್ಲ. ಸಿಎಂ ಬೊಮ್ಮಾಯಿ ಅವರೇ, ನಿಮ್ಮ ಶಾಸಕರ ಈ ವರ್ತನೆ ನಿಮಗೆ ಸಹ್ಯವೇ ಎಂದು ಹರಿಹಾಯ್ದಿದೆ. ಹಾಗೆಯೇ ಮಾಧ್ಯಮಗಳು ಮಹಿಳೆಯರ ಘನತೆಯ ಪರ ಮಾತಾಡಬಾರದೇ? ಮಹಿಳೆಯರು ತಮ್ಮ ಅಹವಾಲು ಹೇಳಬಾರದೇ? ಮಹಿಳೆಯರ ಮೇಲಷ್ಟೇ ಅಲ್ಲ, ಮಾಧ್ಯಮಗಳ ಮೇಲೂ ದಬ್ಬಾಳಿಕೆ ನಡೆಸಿದ್ದಾರೆ ಅರವಿಂದ್ ಲಿಂಬಾವಳಿ. ಇಂತಹ ದರ್ಪ ದೌರ್ಜನ್ಯಕ್ಕೆ, ಕೀಳು ವರ್ತನೆಗೆ ರಾಜ್ಯದ ಜನರು ಪಾಠ ಕಲಿಸುವುದು ನಿಶ್ಚಿತ ಎಂದು ಕಾಂಗ್ರೆಸ್ ಎಚ್ಚರಿಕೆ ನೀಡಿದೆ. : - –- - -