ಬಿಡಿಎ ಅಧ್ಯಕ್ಷರಾಗಿ ಎಸ್.ಆರ್ ವಿಶ್ವನಾಥ್ ನೇಮಕ ರದ್ದು ಕೋರಿ ಸಲ್ಲಿಸಿದ್ಧ ಪಿಐಎಲ್ ಇತ್ಯರ್ಥಪಡಿಸಿದ ಹೈಕೋರ್ಟ್. ಬೆಂಗಳೂರು,ಸೆಪ್ಟಂಬರ್,3,2022(..):ಬಿಡಿಎ ಅಧ್ಯಕ್ಷರಾಗಿ ಎಸ್.ಆರ್ ವಿಶ್ವನಾಥ್ ನೇಮಕ ಮಾಡಿರುವುದನ್ನ ರದ್ದು ಮಾಡುವಂತೆ ಕೋರಿ ಸಲ್ಲಿಸಿದ್ಧ ಪಿಐಎಲ್ ಅನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ. ಶಾಸಕ ಎಸ್.ಆರ್. ವಿಶ್ವನಾಥ್ ಅವರ ಬಿಡಿಎ ಅಧ್ಯಕ್ಷ ನೇಮಕಾತಿ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಬದಲಿಗೆ ಬಿಡಿಎ ಅಧ್ಯಕ್ಷ, ಸದಸ್ಯರ ನೇಮಕಕ್ಕೆ ನಿಯಮ ರೂಪಿಸಿ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಸೂಚನೆ ನೀಡಿದೆ. ಇನ್ನು ಶಾಸಕರಾಗಿ ಲಾಭದಾಯಕ ಹುದ್ಧೆ ಹೊಂದಿದ ಆರೋಪ ಶಾಸಕ ಸ್ಥಾನದಿಂದ ಅನರ್ಹ ಕೋರಿಕೆ ವಿಚಾರ, ಅರ್ಜಿದಾರರ ಮನವಿ ರಾಜ್ಯಪಾಲರ ಪರಿಶೀಲನೆಯಲ್ಲಿದೆ. ರಾಜ್ಯಪಾಲರ ಕಚೇರಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಹಂಗಾಮಿ ಸಿಜೆ ಅಲೋಕ್ ಅರಾಧೆ, ನ್ಯಾ.ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ ತಿಳಿಸಿದೆ. ಈ ಮೂಲಕ ವಕೀಲ ಎ.ಎಸ್.ಹರೀಶ್ ಸಲ್ಲಿಸಿದ್ದ ಪಿಐಎಲ್ ಇತ್ಯರ್ಥವಾದಂತಾಗಿದೆ. : – – – - – - . … .. ’ , 3, 2022 (..): ’ .. . ’ .. . , ... , , . , . ’ . , .. .: ’ / .. / /