ಮುರುಘಾ ಶ್ರೀಗಳ ಬಂಧನ, ತನಿಖೆಯಲ್ಲಿ ವಿಳಂಬವಾಗಿಲ್ಲ-ಗೃಹ ಸಚಿವ ಅರಗ ಜ್ಞಾನೇಂದ್ರ. ಶಿವಮೊಗ್ಗ,ಸೆಪ್ಟಂಬರ್,2,2022(..):ಪೋಕ್ಸೋ ಕಾಯ್ದೆಯಡಿ ಮುರುಘಾ ಶ್ರೀಗಳ ಬಂಧನವಾಗಿದ್ದು ತನಿಖೆಯಲ್ಲಿ ವಿಳಂಬವಾಗಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು. ಈ ಕುರಿತು ಇಂದು ಶಿವಮೊಗ್ಗದಲ್ಲಿ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಪ್ರಕರಣ ಸಂಬಂಧ ಕಾನೂನು ರೀತಿಯಲ್ಲಿ ತನಿಖೆ ನಡೆಯುತ್ತಿದೆ. ಮಠ ಮತ್ತು ಚಿತ್ರದುರ್ಗದಲ್ಲಿ ಭಧ್ರತೆ ಹೆಚ್ಚಿಸಲಾಗಿದೆ. ಶ್ರೀಗಳ ಬಂಧನ ತನಿಖೆಯಲ್ಲಿ ವಿಳಂಬವಾಗಿಲ್ಲ. ಪ್ರಕರಣದಲ್ಲಿ ಪೊಲೀಸರಿಗೆ ಫ್ರೀ ಹ್ಯಾಂಡ್ ನೀಡಲಾಗಿದೆ ಎಂದಿದ್ದಾರೆ. : – -- – – -