ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣ: 2ನೇ ಆರೋಪಿ ಹಾಸ್ಟೆಲ್ ಮಹಿಳಾ ವಾರ್ಡನ್ ಬಂಧನ. ಚಿತ್ರದುರ್ಗ,ಸೆಪ್ಟಂಬರ್,2,2022(..):ವಿದ್ಯಾರ್ಥಿನೀಯರ ಮೇಲೆ ಲೈಂಗಿಕ ದೌರ್ಜನ್ಯ,ಪೋಕ್ಸೋ ಪ್ರಕರಣದಲ್ಲಿ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ಬಂಧನ ಬಳಿಕ ಇದೀಗ ಆರೋಪಿ 2 ಆಗಿರುವ ಲೇಡಿ ವಾರ್ಡನ್ ಬಂಧನವಾಗಿದೆ. ಚಿತ್ರದುರ್ಗ ಪೊಲೀಸರು ನಿನ್ನೆ ಮಹಿಳಾ ವಾರ್ಡನ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಇಂದು ಬಂಧಿಸಿ ವೈದ್ಯಕೀಯ ತಪಾಸಣೆಗೆ ಕರೆದುಕೊಂಡು ಹೋಗಿದ್ದಾರೆ. ಮುರುಘಾಶ್ರೀ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಬಂಧನವಾಗಿದೆ. ಸ್ವಾಮೀಜಿ ಅವರಿಗೆ ಹಣ್ಣು ತೆಗೆದುಕೊಂಡು ಹೋಗಿ ಎಂದು ಮಹಿಳಾ ವಾರ್ಡನ್​ ಹೇಳುತ್ತಿದ್ದರು ಎಂದು ಸಂತ್ರಸ್ತ ಬಾಲಕಿಯರು ವಿಚಾರಣೆಯಲ್ಲಿ ಆರೋಪ ಮಾಡಿದ್ದಾರೆ. ಇನ್ನು ಮಾಜಿ ಶಾಸಕ ಎಸ್.ಕೆ.ಬಸವರಾಜನ್ ವಿರುದ್ಧ ​​ಅತ್ಯಾಚಾರಕ್ಕೆ ಯತ್ನ, ಹಿಂಸೆ ನೀಡಿದ್ದಾರೆಂದು ಆರೋಪಿಸಿ ಹಾಸ್ಟೆಲ್​​ನ ಮಹಿಳಾ ವಾರ್ಡನ್ ದೂರು ನೀಡಿದ್ದರು. ಈ ಕುರಿತು ಎಸ್.ಕೆ.ಬಸವರಾಜನ್ ವಿರುದ್ಧ ಪ್ರಕರಣ ದಾಖಲಾಗಿದೆ. ಬಸವರಾಜನ್ ಹಾಗೂ ಪತ್ನಿ ಸೌಭಾಗ್ಯ ಬಸವರಾಜನ್ ಗೆ ನಿನ್ನೆ ಜಾಮೀನು ಸಿಕ್ಕಿದೆ. : - - - -2nd - - - -.