ಮೈಸೂರಿನಲ್ಲಿ ಹಂದಿ ಜ್ವರಕ್ಕೆ ಬಲಿಯಾದ ಗರ್ಭಿಣಿ. ಮೈಸೂರು,ಸೆಪ್ಟಂಬರ್,1,2022(..):ಮಳೆ ಅವಾಂತರಗಳ ಬಳಿಕ ಇದೀಗ ರೋಗಗಳ ಭೀತಿ ಎದುರಾಗಿದ್ದು, ಮೈಸೂರಿನಲ್ಲಿ ಹಂದಿ ಜ್ವರಕ್ಕೆ ಗೃಹಿಣಿ ಬಲಿಯಾಗಿದ್ದಾರೆ. ಹುಣಸೂರು ತಾಲ್ಲೂಕು ಕೋಣನಹೊಸಹಳ್ಳಿ ಗ್ರಾಮದ ಸ್ವಾಮಿನಾಯ್ಕ ಎಂಬುವವರ ಪುತ್ರಿ ಛಾಯಾ ಎಚ್‌1 ಎನ್1 ನಿಂದ ಮೃತಪಟ್ಟಿದ್ದಾರೆ. ಮೃತ ಛಾಯಾಗೆ 4 ವರ್ಷದ ಗಂಡು ಮಗುವಿದ್ದು 2ನೇ ಮಗುವಿನ ನಿರೀಕ್ಷೆಯಲ್ಲಿದ್ದರು. ಇನ್ನು ಕೆಲವೇ ದಿನದಲ್ಲಿ ಮಗುವಿಗೆ ಜನ್ಮ ನೀಡಬೇಕಿದ್ದ ಛಾಯಾ ಹಂದಿಜ್ವರಕ್ಕೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಛಾಯಾ ಅವರನ್ನ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಛಾಯಾ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. : - –H1 N1-- .