ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಇಳಿಕೆ. ನವದೆಹಲಿ,ಸೆಪ್ಟಂಬರ್,1,2022(..):ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 91.5 ರೂ ಇಳಿಕೆಯಾಗಿದೆ. ಗೃಹ ಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. 19 ಕೆಜಿ ತೂಕದ ಅಡುಗೆ ಅನಿಲದ ವಾಣಿಜ್ಯ ಸಿಲಿಂಡರ್ ​ಗಳ ಬೆಲೆ 91.5 ರೂ. ಇಳಿಕೆಯಾಗಿದೆ. ಈ ಮೂಲಕ ದೆಹಲಿಯಲ್ಲಿ 1,976.50 ರೂ ಇದ್ಧ ವಾಣಿಜ್ಯ ಎಲ್​ಪಿಜಿ ಸಿಲಿಂಡರ್​ ಬೆಲೆಯು ಈಗ 1,885ಕ್ಕೆ ಮಾರಾಟವಾಗುತ್ತಿದೆ. ಕಲ್ಕತ್ತಾದಲ್ಲಿ ಪ್ರಸ್ತುತ 1,995.50 ರೂ.ಗೆ ಮಾರಾಟವಾಗುತ್ತಿದೆ. ಚೆನ್ನೈನಲ್ಲಿ 2,045 ರೂ.ಗೆ. ಬೆಂಗಳೂರಿನಲ್ಲಿ 1,685 ರೂ.ಗೆ ಸಿಲಿಂಡರ್ ಮಾರಾಟವಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. : 91.5rupee – - —-