2028ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಬರೆದಿಟ್ಟುಕೊಳ್ಳಿ- ಹೆಚ್.ಡಿಕೆಗೆ ಡಿಕೆ ಶಿವಕುಮಾರ್ ಸವಾಲು ಬೆಂಗಳೂರು,ಜುಲೈ,27,2024 (..):2028ಕ್ಕೆ ನಾವು ಅಧಿಕಾರಕ್ಕೆ ಬಂದು ಮತ್ತೆ ರಾಮನಗರ ಎಂದು ಹೆಸರು ಬದಲಿಸುತ್ತೇವೆ ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿರುವ ಡಿಸಿಎಂ ಡಿಕೆ ಶಿವಕುಮಾರ್, ಹೆಚ್.ಡಿಕೆ ಹಣೆಯಲ್ಲೂ ಬರೆದಿಲ್ಲ. 2028ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಬರೆದಿಟ್ಟುಕೊಳ್ಳಿ ಎಂದು ಸವಾಲು ಹಾಕಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಕುಮಾರಸ್ವಾಮಿ ನನ್ನ ಸರ್ವನಾಶ ಬಯಸುತ್ತಾರೆ. ಕುಮಾರಸ್ವಾಮಿ ಅವರಿಗೆ ವಿಚಾರದ ಅರಿವಿದೆ, ರಾಮನಗರ ಟಚ್ ಮಾಡಲ್ಲ. ಅದು ಅಲ್ಲೇ ಇರುತ್ತೆ. ರಾಮನಗರಕ್ಕೆ ಬಂದು ಅಕ್ರಮಕ್ಕೆ ಪ್ರಯತ್ನ ಮಾಡಲು ಯತ್ನಿಸಿದ್ದಾರೆ. ರಾಮನಗರ ಚನ್ನಪಟ್ಟಣ ಮಾಗಡಿ ಎಲ್ಲರೂ ನಮ್ಮವರೇ ಮುಂದಿನ ಪೀಳಿಗೆಗಾಗಿ ಹೆಸರು ಇಡಲಾಗಿದೆ ಎಂದರು. ರಾಮನಗರ ಹೆಸರನ್ನ ಬೆಂಗಳೂರು ದಕ್ಷಿಣ ಎಂದು ಹೆಸರು ಬದಲಿಸಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿದ್ದು, ಇದಕ್ಕೆ ವಿಪಕ್ಷಗಳಿಂದ ಸಾಕಷ್ಟು ವಿರೋಧ ವ್ಯಕ್ತವಾಗಿದೆ. : , , 2028, ,