ನನ್ನ ವಿರುದ್ಧ ಪಿತೂರಿ: ಆರೋಪ ಮುಕ್ತನಾಗಿ ಬರುವೆ- ಮುರುಘಾಶ್ರೀಗಳಿಂದ ವಿಶ್ವಾಸ. ಚಿತ್ರದುರ್ಗ,ಆಗಸ್ಟ್, 29,2022(..):ತಮ್ಮ ವಿರುದ್ಧ ಕೇಳಿ ಬಂದಿರುವ ಲೈಂಗಿಕ ದೌರ್ಜನ್ಯ ಆರೋಪದ ಕುರಿತು ಮಾತನಾಡಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶ್ರೀಗಳು, ಭಕ್ತಾದಿಗಳು ಆತಂಕಪಡಬೇಕಿಲ್ಲ. ನನ್ನ ವಿರುದ್ಧ ಪಿತೂರಿ ನಡೆಸಲಾಗಿದ್ದು, ಆರೋಪ ಮುಕ್ತನಾಗಿ ಬರುವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಇಂದು ಮಾತನಾಡಿದ ಮುರುಘಾ ಶ್ರೀಗಳು, ಭಕ್ತಾದಿಗಳು ಯಾವುದಕ್ಕೂ ಹೆದರುವ ಅವಶ್ಯಕತೆ ಇಲ್ಲ. ಎದುರಾಗಿರುವ ಸಮಸ್ಯೆಯನ್ನ ಶಾಂತವಾಗಿ ಬಗೆಹರಿಸೋಣ. ನಿಮ್ಮೆಲ್ಲರ ಸಲುವಾಗಿ ನಾವು ಧೈರ್ಯವಾಗಿ ಇರುತ್ತೇವೆ. ಇಷ್ಟು ದಿನ ಮಠದ ಒಳಗೆ ಪಿತೂರಿ ನಡೆಯುತ್ತಿತ್ತು. ಈಗ ಹೊರಗೆ ಪಿತೂರಿ ನಡೆಯುತ್ತಿದೆ ಪ್ರತಿ ಸಮಸ್ಯೆಗೂ ಒಂದು ಅಂತ್ಯ ಇರುತ್ತೆ. ನಾವು ಈ ನೆಲದ ಕಾನೂನನ್ನು ಗೌರವಿಸಬೇಕು. ಆ ಕಾನೂನನ್ನು ಗೌರವಿಸೋ ಮಠಾಧೀಶರಾಗಿದ್ದೇವೆ. ಆ ಗೌರವವನ್ನು ನಾನು ಕೂಡ ಮಾಡುತ್ತೇನೆ. ಕಾನೂನು ಗೌರವಿಸುತ್ತಾ ಪ್ರಕರಣ ಸಂಬಂಧದ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತದೆ. ಇದರಲ್ಲಿ ಯಾವುದೇ ಫಲಾಯನವಾದ ಇಲ್ಲ ಎಂದು ಮುರುಘಾ ಶ್ರೀಗಳು ಹೇಳಿದರು. ಹಾಗೆಯೇ ಭಕ್ತಾದಿಗಳು ಯಾವುದೇ ರೀತಿಯ ಊಹಾಪೋಹಗಳು, ಗಾಳಿ ಸುದ್ದಿಗಳನ್ನು ನಂಬಬಾರದು. ನಾವುಗಳು ನ್ಯಾಯದ ಸ್ಥಾನದಲ್ಲಿದ್ದೇವೆ. ಮುರುಘಾ ಮಠ ಒಂದಾನೊಂದು ಕಾಲದಲ್ಲಿ ಚಲಿಸುವ ನ್ಯಾಯಾಲಯವಾಗಿ ಕಾರ್ಯ ಮಾಡಿದೆ. ಎಲ್ಲಾ ವರ್ಗದವರಿಗೂ ಮಠವು ಪ್ರೀತಿಯಿಂದ ಅಕ್ಕರೆಯಿಂದ ನೋಡಿಕೊಂಡು ಬಂದಿದೆ. ಏನೋ ಅಹಿತಕರ ಘಟನೆ ನಡೆದಿದೆ. ನಾವು ಅದರಿಂದ ಹೊರಗಡೆ ಬಂದೇ ಬರುತ್ತೇವೆ ಎಂದು ಮುರುಘಾ ಶ್ರೀಗಳು ತಿಳಿಸಿದರು. : --- … : – , 29, 2022 (..): , , . , . “ . . , . ,” .“ . . . ,” . . “ . . , . . ,” .: / /