ಮೈಸೂರಿನಲ್ಲಿ ಆ.29 ರಂದು “ ” ವಿಶೇಷ ಕಾರ್ಯಕ್ರಮ: ಮುಖ್ಯ ಅತಿಥಿಯಾಗಿ ನಿರಂಜನ್ ಮುಕುಂದನ್. ಮೈಸೂರು,ಆಗಸ್ಟ್,26,2022(..):ಮೇಜರ್ ಧ್ಯಾನ್ ಚಂದ್ ಸ್ಮರಣಾರ್ಥವಾಗಿ ಕೇಂದ್ರ ಸರ್ಕಾರದ ಕ್ರೀಡಾ ಮತ್ತು ಯುವಜನ ವ್ಯವಹಾರ ವಿಭಾಗವು ದಿನಾಂಕ 29ನೇ ಆಗಸ್ಟ್ 2022ರಂದು ರಾಷ್ಟ್ರೀಯ ಕ್ರೀಡಾ ದಿನವನ್ನು ಹಮ್ಮಿಕೊಂಡು ಆಚರಿಸುತ್ತಿದೆ. ಇದರ ಅಂಗವಾಗಿ “ ” ಎಂಬ ವಿಶೇಷ ಕಾರ್ಯಕ್ರಮವನ್ನು ಭಾರತೀಯ ಕ್ರೀಡಾ ಪ್ರಾಧಿಕಾರವು ಆಯೋಜಿಸಿದೆ. ಕಾರ್ಯಕ್ರಮವು ಭಾರತದಾದ್ಯಂತ 25 ಸ್ಥಳಗಳಲ್ಲಿ ಒಂದೇ ದಿನ ಏಕ ಕಾಲದಲ್ಲಿ ಈ ಕಾರ್ಯಕ್ರಮವು ಬೆಳಿಗ್ಗೆ 10.00 ಘಂಟೆಯಿಂದ 11.30 ಘಂಟೆಯವರೆಗೆ ನಡೆಯಲಿದೆ. ಕ್ರೀಡಾ ಸಂಸ್ಕೃತಿಯನ್ನು ಯುವಜನತೆಯಲ್ಲಿ ಪ್ರೋತ್ಸಾಹಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ವ್ಯಾಪಕವಾಗಿ ಆಚರಿಸಲಾಗುತ್ತಿದೆ. ಕರ್ನಾಟಕದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲು ಒಂದೇ ಒಂದು ಸ್ಥಳವನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಅದು ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲೆ, ಯಾದವಗಿರಿ. ಚ್ಯಾಂಪಿಯನ್ ಕ್ರೀಡಾ ಪಟು ಮತ್ತು ಅಂತರ ರಾಷ್ಟ್ರೀಯ ಪ್ಯಾರಾ ಈಜುಗಾರರಾದ ನಿರಂಜನ್ ಮುಕುಂದನ್ ಅವರು 29 ಆಗಸ್ಟ್ 2022 (ಸೋಮವಾರ) ನಡೆಯಲಿರುವ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. ಚಾಂಪಿಯನ್ ಪ್ಯಾರಾ ಈಜುಗಾರರಾದ ನಿರಂಜನ್ ಮುಕುಂದನ್ ಅವರನ್ನು ಶ್ರೀ ರಾಮಕೃಷ್ಣ ವಿದ್ಯಾಶಾಲೆಯ ವಿದ್ಯಾರ್ಥಿಗಳು ಗೌರವಪೂರ್ವಕವಾಗಿ ಸ್ವಾಗತಿಸುವರು ಮತ್ತು ಶ್ರೀ ರಾಮಕೃಷ್ಣ ವಿದ್ಯಾಶಾಲೆಯ ಈಜುಕೊಳದ ಬಳಿ ಈ ಕಾರ್ಯಕ್ರಮವು ನಡೆಯಲಿದ್ದು, ವಿದ್ಯಾಥಿಗಳು ಹಲವು ಈಜು ಕೌಶಲ್ಯಗಳ ಪ್ರದರ್ಶನ ನೀಡಲಿದ್ದಾರೆ. ಇದಾದ ನಂತರ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ವಿದ್ಯಾರ್ಥಿಗಳನ್ನು ಕುರಿತು ಭಾಷಣ ಮಾಡಿ, ಸಂವಾದ ನಡೆಸಲಿದ್ದಾರೆ. ಈ ಕಾರ್ಯಕ್ರಮದ ಅಂಗವಾಗಿ ಒಂದು ಕ್ರೀಡಾ ರಸ ಪ್ರಶ್ನಾವಳಿ ( ) ಅನ್ನು ಆಯೋಜಿಸಲಾಗಿದೆ. ಒಟ್ಟು ಐದು ವಿಜೇತ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳ ಹಸ್ತಾಕ್ಷರವನ್ನು ಹೊಂದಿರುವ ಒಂದು ಒಲಂಪಿಕ್‌ ಜರ್ಸಿಯನ್ನು ಬಹುಮಾನವಾಗಿ ನೀಡಲಾಗುತ್ತಿದೆ. : “ - – -