ಇಂದು ವೂಟ್ ಸೆಲೆಕ್ಟ್ ‘ಪೆಟ್ರೋಮ್ಯಾಕ್ಸ್’ ರಿಲಿಸ್ ಜುಲೈ 15ರಂದು ಥಿಯೇಟರ್​ನಲ್ಲಿ ರಿಲೀಸ್​ ಆಗಿದ್ದ ‘ಪೆಟ್ರೋಮ್ಯಾಕ್ಸ್​’ ಸಿನಿಮಾ ಈಗ ಒಟಿಟಿ ಪ್ಲಾಟ್​ಫಾರ್ಮ್​ಗೆ ಬರುತ್ತಿದೆ. ವೂಟ್​ ಸೆಲೆಕ್ಟ್ ಮೂಲಕ ಈ ಚಿತ್ರ ವೀಕ್ಷಣೆಗೆ ಲಭ್ಯವಾಗಲಿದೆ. ಆಗಸ್ಟ್​ 26ರಿಂದ ‘ಪೆಟ್ರೋಮ್ಯಾಕ್ಸ್​’ ಚಿತ್ರದ ಸ್ಟ್ರೀಮಿಂಗ್​ ಆರಂಭ ಆಗಲಿದೆ. ಚಿತ್ರಕ್ಕೆ ‘ನೀರ್​ ದೋಸೆ’ ಖ್ಯಾತಿಯ ವಿಜಯ್​ ಪ್ರಸಾದ್ ನಿರ್ದೇಶನ ಮಾಡಿದ್ದಾರೆ. ಸುಧೀರ್ ಕೆ.ಎಂ. ಮತ್ತು ರಾಜಶೇಖರ್ ಕೆ.ಜಿ. ಬಂಡವಾಳ ಹೂಡಿದ್ದಾರೆ. ಸತೀಶ್ ನೀನಾಸಂ, ಹರಿಪ್ರಿಯಾ, ನಾಗಭೂಷಣ್, ಕಾರುಣ್ಯ ರಾಮ್​, ಅಚ್ಯುತ್ ಕುಮಾರ್, ಸುಮನ್ ರಂಗನಾಥನ್, ಅರುಣ್ ಕುಮಾರ್ ಇತರರು ಚಿತ್ರದಲ್ಲಿ ನಟಿಸಿದ್ದಾರೆ.