40 ಪರ್ಸೆಂಟ್ ಹಣ ಕೇಳಿರುವ ಬಗ್ಗೆ ದಾಖಲೆ ಕೊಡದಿದ್ದರೇ ಮಾನನಷ್ಟ ಮೊಕದ್ಧಮೆ ಹಾಕುವೆ-ಸಚಿವ ಮುನಿರತ್ನ. ನವದೆಹಲಿ,ಆಗಸ್ಟ್,24,2022(..):ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ತಾವು ಮಾಡಿರುವ ಅರೋಪಗಳಿಗೆ ದಾಖಲೆ ನೀಡದಿದ್ದರೇ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ಹೇಳಿದ್ದಾರೆ. ಕೆಂಪಣ್ಣ ಆರೋಪ ಕುರಿತು ಮಾತನಾಡಿದ ಸಚಿವ ಮುನಿರತ್ನ, ಆರೋಪ ಮಾಡೋದು ದೊಡ್ಡ ಸಂಗತಿಯಲ್ಲ ಆದರೆ ಅದನ್ನು ಪ್ರೂವ್ ಮಾಡಬೇಕಾಗುತ್ತದೆ. ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು ಎನ್ನುವ ಉದ್ದೇಶದಿಂದ ಸುಖಾಸುಮ್ಮನೆ ಆರೋಪಗಳನ್ನು ಮಾಡಲಾಗುತ್ತಿದೆ. 40 ಪರ್ಸೆಂಟ್ ಹಣ ಕೇಳಿರುವ ಬಗ್ಗೆ ದಾಖಲೆ ಕೊಡಲಿ. ಕೆಂಪಣ್ಣ ಆರೋಪವನ್ನ ಗಂಭೀರವಾಗಿ ಪರಿಗಣಿಸಿದ್ದೇನೆ ಇದು ಸಿದ್ಧರಾಮಯ್ಯ ಮಾರ್ಗದರ್ಶನದಂತೆ ನಡೆಯುತ್ತಿದೆ. ರಾಜಕೀಯ ದುರುದ್ಧೇಶದಿಂದ ನಡೆಯುತ್ತಿದೆ ಸಮಸ್ಯೆ ಇದ್ರೆ ಲೋಕಾಯುಕ್ತಕ್ಕೆ ಹೋಗಲಿ ಎಂದರು. ಕೆಂಪಣ್ಣ ಗಾಳಿಯಲ್ಲಿ ಗುಂಡು ಹೊಡೆಯುವುದು ಸರಿಯಲ್ಲ. ಈ ಬಗ್ಗೆ ನಾನು ನಮ್ಮ ವಕೀಲರ ಜತೆ ಚರ್ಚಿಸುತ್ತೇನೆ ಕಾನೂನಿನ ಮೂಲಕ ಉತ್ತರ ನೀಡುತ್ತೇನೆ ಎಂದು ಸಚಿವ ಮುನಿರತ್ನ ಹೇಳಿದರು. : – – 40 –-- .