ಮೈಸೂರಿನ ಗ್ಯಾಂಗ್ ರೇಪ್ ಪ್ರಕರಣಕ್ಕೆ ವರ್ಷದ ಕರಾಳ ನೆನಪು. ಮೈಸೂರು,ಆಗಸ್ಟ್,24,2022(..):ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಮೈಸೂರಿನ ಯುವತಿ ಮೇಲೆ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಇಂದು ವರ್ಷದ ಕರಾಳ ನೆನಪು. ಈ ಘಟನೆ ಜರುಗಿ ಒಂದು ವರ್ಷ ಕಳೆದಿದೆ. ಚಾಮುಂಡಿಬೆಟ್ಟದ ಲಲಿತಾದ್ರಿಪುರಂನಲ್ಲಿ ನಡೆದಿದ್ದ ಈ ಘಟನೆ ನಡೆದಿತ್ತು. ಮೈಸೂರಿನ ಖಾಸಗಿ ವಿದ್ಯಾಸಂಸ್ಥೆಯಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ ಯುವತಿ ಮೇಲೆ ಕಳೆದ ವರ್ಷ ಆಗಸ್ಟ್ 23 ರಂದು ಸಾಮೂಹಿಕ ಅತ್ಯಾಚಾರ ನಡೆದಿತ್ತು. ಯುವತಿ ಸ್ನೇಹಿತ‌ನ ಜೊತೆ ಏಕಾಂತವಾಗಿದ್ದಾಗ ಆರು ಮಂದಿ ಕಾಮುಕರು ಯುವತಿ ಮೇಲೆ ಅತ್ಯಾಚಾರವೆಸಗಿದ್ದರು. ಘಟನೆಯಿಂದ‌ ಇಡೀ ರಾಜ್ಯವೇ ತಲೆ ತಗ್ಗಿಸಿತ್ತು. ಮೈಸೂರಿಗೆ ಮಹಿಳಾ ಆಯೋಗ, ಗೃಹ ಸಚಿವರೇ ಆಗಮಿಸಿದ್ದರು. ಘಟನೆ ಜರುಗಿದ ಕೆಲ ದಿನಗಳಲ್ಲೇ ಆರೋಪಿಗಳ ಸೆರೆಯೂ ಆಗಿತ್ತು. ತಮಿಳುನಾಡಿನ ಆರು ಮಂದಿ ಕಿರಾಕತರಿಂದ ಕೃತ್ಯ ನಡೆದಿತ್ತು. ಎಪಿಎಂಸಿ ಬಾಳೆ ಮಂಡಿಗೆ ಬಂದು, ಬಳಿಕ ಮದ್ಯ ಸೇವಿಸಿ ಕೃತ್ಯ ಎಸಗಿ ಆರೋಪಿಗಳು ಪರಾರಿಯಾಗಿದ್ದರು. ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಲ್ಲದೇ, ಕೊಲೆ ಬೆದರಿಕೆಯನ್ನೂ ಹಾಕಿದ್ದರು. ಇದೀಗ ಇಂದಿಗೆ ಈ ಗ್ಯಾಂಗ್ ರೇಪ್ ಘಟನೆ ನಡೆದು ಸದ್ಯ ಒಂದು ವರ್ಷ ಕಳೆದಿದೆ. ಆಗಸ್ಟ್ 23ರ ರಾತ್ರಿ ಘಟನೆ ನಡೆದರೂ ಆ.24 ರಂದು ಪ್ರಕರಣ ಬೆಳಕಿಗೆ ಬಂದಿತ್ತು. : - - – - .