ಬಾಕಿ ಬಿಲ್ ಬಿಡುಗಡೆ ಮಾಡದಿದ್ದರೇ ಆತ್ಮಹತ್ಯೆ ಹಿಡಿಯುವ ಪರಿಸ್ಥಿತಿ: ಸಿಎಂಗೆ ಪತ್ರ ಬರೆದು ಮತ್ತೊಂದು ಗುತ್ತಿಗೆದಾರರ ಸಂಘದಿಂದ ಎಚ್ಚರಿಕೆ. ಬೆಂಗಳೂರು,ಆಗಸ್ಟ್,24,2022(..):ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ದೂರಿನ ಬಳಿಕ ಇದೀಗ ಮತ್ತೊಂದು ಗುತ್ತಿಗೆದಾರರ ಸಂಘ ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದು ಬಾಕಿ ಇರುವ ಬಿಲ್ ಬಿಡುಗಡೆ ಮಾಡುವಂತೆ ಮನವಿ ಮಾಡಿದೆ. ಬಾಕಿ ಇರುವ ಬಿಲ್ ಬಿಡುಗಡೆಗೊಳಿಸದೇ ಇದ್ದರೆ ಗುತ್ತಿಗೆದಾರರು ಆತ್ಮಹತ್ಯೆ ಹಾದಿ ಹಿಡಿಯುವ ಪರಿಸ್ಥಿತಿ ಉಂಟಾಗುತ್ತದೆ ಎಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಗುತ್ತಿಗೆದಾರರ ಸಂಘ ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದು ಪ್ರತಿಭಟನೆ ಎಚ್ಚರಿಕೆ ನೀಡಿದೆ. ಪ್ರತಿಯೊಬ್ಬ ಗುತ್ತಿಗೆದಾರರು ತೀವ್ರ ಸಂಕಷ್ಟ ಹಾಗೂ ಹಣಕಾಸಿನ ತೊಂದರೆಯಿಂದ ಕಾಮಗಾರಿ ಸ್ಥಳಕ್ಕೆ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಟ್ಟಡ ಕಾಮಗಾರಿಗಳ ಉಪಕರಣ ನೀಡಿದ ವ್ಯಾಪಾರಿಗಳು, ಕಾರ್ಮಿಕರು, ಸಾಲ ನೀಡಿದ ಸಂಸ್ಥೆಗಳು ತೀವ್ರ ಒತ್ತಡ ಹೇರುತ್ತಿದ್ದಾರೆ. ಕೆಲ ಗುತ್ತಿಗೆದಾರರು ಒತ್ತಡದಿಂದ ಮನ ನೊಂದಿದ್ದಾರೆ. ಕೆಲವರು ಸಾಲಭಾದೆ ತಾಳಲಾರದೇ ಆತ್ಮಹತ್ಯೆಯಂತಹ ತೀರ್ಮಾನಕ್ಕೆ ಬಂದಿದ್ದಾರೆ. ಈ ವಿಚಾರ ನಮ್ಮ ಸಂಘದ ಗಮನಕ್ಕೆ ಬಂದಿದೆ. ನಮ್ಮ ಸಂಘದ ವತಿಯಿಂದ ಎಲ್ಲಾ ಗುತ್ತಿಗೆದಾರರನ್ನು ಕರೆಸಿ ಸಮಾಧಾನಪಡಿಸಿ ಕಳಿಸಿದ್ದೇವೆ. ಇನ್ನೊಮ್ಮೆ ಕೊನೆಯದಾಗಿ ಸಿಎಂ ರವರನ್ನ ಭೇಟಿ ಮಾಡುವುದಾಗಿ ಹೇಳಿ ಕಳಿಸಿದ್ದೇವೆ. ಗುತ್ತಿಗೆದಾರರು ಎಸ್.ಸಿ, ಎಸ್.ಟಿ. ಹಾಗೂ ಹಿಂದುಳಿದ ವರ್ಗಗಳ ಸಮುದಾಯದ ಮಕ್ಕಳ ವಸತಿ ಶಾಲೆಗಳ ಕಟ್ಟಡ ಕಾಮಗಾರಿಗಳನ್ನ ಮಾಡಿದ್ದಾರೆ. ಕಳೆದ ಏಳೆಂಟು ತಿಂಗಳಿದ ಬಾಕಿ ಪಾವತಿ ಬೆಳೆಯುತ್ತಲೇ ಇದೆ. ಸುಮಾರು 1200 ಕೋಟಿಯಷ್ಟು ಮೊತ್ತ ಗುತ್ತಿಗೆದಾರರಿಗೆ ಬಿಡುಗಡೆಯಾಗಬೇಕಿದೆ. ಬಾಕಿ ಬಿಲ್ ಬಿಡುಗಡೆಗೆ ಮನವಿ ಮಾಡಿ ತಮ್ಮನ್ನು ಭೇಟಿಯಾಗಿದ್ದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರನ್ನ ಭೇಟಿ ಮನವಿ ಮಾಡಿದ್ರು ಪ್ರಯೋಜನವಾಗಿಲ್ಲ. ಹೀಗೆ ಮುಂದುವರೆದರೇ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಗುತ್ತಿಗೆದಾರರ ಸಂಘ ಎಚ್ಚರಿಕೆ ನೀಡಿದೆ. : – – - –- – -. … : . , 24, 2022 (..): ’ , ’ . ’ , , ’ .“ . . . . . ,” .“ ’ , . , 7-8 . . 1,200 . . . ,” ’ .: ’/ / /