ಮೇಯರ್, ಉಪಮೇಯರ್ ಮೀಸಲು ಪ್ರಕಟ: ನಾಡಹಬ್ಬ ಮೈಸೂರು ದಸರಾಗೆ ಹೊಸ ‌ಮೇಯರ್..! ಮೈಸೂರು,ಆಗಸ್ಟ್,24,2022(..):ರಾಜ್ಯದ 10 ನಗರ ಪಾಲಿಕೆಗಳ ಮೇಯರ್, ಉಪಮೇಯರ್ ಸ್ಥಾನಕ್ಕೆ ಮೀಸಲು ಪ್ರಕಟಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮೈಸೂರು ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಮೇಯರ್ ಹಿಂದುಳಿದ‌ ವರ್ಗಗಳ‌ ಮಹಿಳೆಗೆ ಮೀಸಲಿರಿಸಲಾಗಿದೆ. ಮೀಸಲು ಪ್ರಕಟಿಸಿ ಟಿ.ಮಂಜುನಾಥ್ ಅವರು ಪ್ರಕಟಣೆ ಹೊರಡಿಸಿದ್ದಾರೆ. ಕಳೆದ 5 ತಿಂಗಳಿಂದ ಮೀಸಲು ಪ್ರಕಟವಾಗಿರಲಿಲ್ಲ. ಮೈಸೂರು ಹಾಲಿ ಮೇಯರ್ ಸುನಂದಾ ಪಾಲನೇತ್ರ ಅವಧಿ ಮುಗಿದು 5 ತಿಂಗಳು ಕಳೆದಿತ್ತು. ಹೀಗಾಗಿ ಹಂಗಾಮಿ‌ ಮೇಯರ್ ಆಗಿ ಮುಂದುರಿದಿದ್ದರು. ಜೆಡಿಎಸ್- ಬಿಜೆಪಿ ಮೈತ್ರಿಯಿಂದ‌ ಮೇಯರ್ ಆಗಿದ್ದರು. ಸುನಂದಾ ಪಾಲನೇತ್ರ, ಮಾಜಿ ಸಿಎಂ‌ ಬಿಎಸ್ ವೈ ಅವರ ದೂರದ ಸಂಬಂಧಿಯಾಗಿದ್ದಾರೆ. ಇದೀಗ ಮೇಯರ್ ಉಪಮೇಯರ್ ಸ್ಥಾನಕ್ಕೆ ಮೀಸಲು ಪ್ರಕಟವಾಗಿದ್ದು, ನಾಡಹಬ್ಬ ಮೈಸೂರು ದಸರಾ ವೇಳೆಗೆ ಹೊಸ‌ಮೇಯರ್ ಆಗಮನವಾಗುವ ಸಾಧ್ಯತೆ ಇದೆ. : - - –-