ಸೆ. 26ರಿಂದ ಮೈಸೂರು ದಸರಾ ವಸ್ತು ಪ್ರದರ್ಶನ ಪ್ರಾರಂಭ: ಈ ಬಾರಿ ವಿಶೇಷತೆ ಏನು..? ಮೈಸೂರು,ಆಗಸ್ಟ್,24,2022(..):ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಒಂದುವರೆ ತಿಂಗಳ ಮುಂಚೆಯೇ ಸಕಲ ಸಿದ್ಧತೆ ಮಾಡಲಾಗುತ್ತಿದ್ದು ಈ ನಡುವೆ ಸೆಪ್ಟಂಬರ್ 26 ರಿಂದ ಈ ಬಾರಿ ದಸರಾ ವಸ್ತು ಪ್ರದರ್ಶನ ಪ್ರಾರಂಭವಾಗಲಿದೆ. ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಮಾಹಿತಿ ನೀಡಿದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಮೂರ್ತಿ , ವಿಶೇಷ ಕಾರ್ಯಕ್ರಮಗಳೊಂದಿಗೆ 90 ದಿನಗಳ ಕಾಲ ವಸ್ತುಪ್ರದರ್ಶನ ಆಯೋಜನೆ ಮಾಡಲಾಗಿದೆ. ಈ ಬಾರಿಯ ವಸ್ತುಪ್ರದರ್ಶನದಲ್ಲಿ ಪುನೀತ್ ರಾಜ್ ಕುಮಾರ್ ನೆನಪಿಗಾಗಿ 7 ಸ್ಯಾಂಡ್ ಮ್ಯೂಸಿಯಂ ಆಯೋಜನೆ ಮಾಡಲಾಗಿದೆ, ಯೋಗ 3ಡಿ ವಿಡಿಯೋ ಮ್ಯಾಪಿಂಗ್ ಇರಲಿದೆ ಎಂದರು. ಹಾಗೆಯೇ ಆವರಣದಲ್ಲಿ ವೆಜ್ ಅಂಡ್ ನಾನ್ ವೆಜ್ ಪ್ರತ್ಯೇಕ ಸ್ಟಾಲ್ ಇರಲಿದೆ. 6 ಮಂದಿ ಸ್ವಾತಂತ್ರ್ಯ ಹೋರಾಟಗಾರರ ಮರಳಾಕೃತಿ ನಿರ್ಮಿಸಲಾಗುತ್ತದೆ, ಆ 6 ಮಂದಿ ಸ್ವಾತಂತ್ರ್ಯ ಹೋರಾಟಗಾರರನ್ನ ಇನ್ನು ಆಯ್ಕೆ ಮಾಡಿಲ್ಲ. ಇನ್ನು ಕಾವೇರಿ ಬಹುಮಾಧ್ಯಮ ಕಲಾ ಗ್ಯಾಲರಿ ಉದ್ಘಾಟನೆಯಾಗಲಿದೆ. ವಸ್ತುಪ್ರದರ್ಶನದ ಅವರಣವನ್ನ ಪ್ಲಾಸ್ಟಿಕ್ ಮುಕ್ತ ವಲಯ ಎಂದು ಘೋಷಣೆ ಹಿನ್ನೆಲೆ ಪ್ಲಾಸ್ಟಿಕ್ ಬಳಸುವಂತಿಲ್ಲ. ಪ್ಲಾಸ್ಟಿಕ್ ಬಳಕೆ ತಡೆಗಟ್ಟಲು ಪ್ರಾಧಿಕಾರದ ವತಿಯಿಂದಲೇ ಆರ್ ಓ ಪ್ಲಾಂಟ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ಎರಡು ವರ್ಷಗಳ ಕೋವಿಡ್ ಬಳಿಕ ಅದ್ದೂರಿ ವಸ್ತು ಪ್ರದರ್ಶನ ನಡೆಯುತ್ತಿದ್ದು, ಈ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು, ನಗರದ ಜನತೆ ಆಗಮಿಸುವಂತೆ ಮಿರ್ಲೆ ಶ್ರೀನಿವಾಸ್ ಗೌಡ ಮನವಿ ಮಾಡಿದ್ದಾರೆ. : - – 26 … . 26: ’ ?, 24, 2022 (..): . 26 . , 90 . ’ , 3D . . 6 . , . . . , . , . .: / 26/